More

    ದೆಹಲಿ ಗಡಿಯ ರೈತ ಹೋರಾಟಕ್ಕೆ 100 ದಿನ ಪೂರೈಸಲಿದೆ…

    ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾಗಿ ನಾಳೆಗೆ ನೂರು ದಿನಗಳು ಪೂರೈಸುತ್ತವೆ. ಈ ಸಂದರ್ಭದಲ್ಲಿ ನವದೆಹಲಿಯ ಹೊರಗಿನ ಪ್ರಮುಖ ಎಕ್ಸ್​ಪ್ರೆಸ್​ವೇನಲ್ಲಿ ರಸ್ತೆ ತಡೆ ನಡೆಸುವ ನಿರ್ಧಾರವನ್ನು ರೈತನಾಯಕರು ತೆಗೆದುಕೊಂಡಿದ್ದಾರೆ.

    ಸರ್ಕಾರದ ಗಮನ ಸೆಳೆಯಲು ಕುಂಡ್ಲಿ-ಮನೇಸರ್-ಪಲವಾಲ್(ಕೆಎಂಪಿ) ಎಕ್ಸ್​ಪ್ರೆಸ್​ವೇ ಎಂದೂ ಕರೆಯಲಾಗುವ ಸಿಕ್ಸ್​-ಲೇನ್ ವೆಸ್ಟರ್ನ್ ಪೆರಿಫೆರಲ್ ಎಕ್ಸ್​ಪ್ರೆಸ್​ವೇನಲ್ಲಿ ಪ್ರತಿಭಟನಾಕಾರರು ಶನಿವಾರ (ಮಾರ್ಚ್ 6) ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ರಸ್ತೆ ತಡೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್​ಕೆಎಂ) ಘೋಷಿಸಿದೆ.

    ಇದನ್ನೂ ಓದಿ: ಸಾಲಮನ್ನಾದಿಂದ ರೈತರ ಅಭಿವೃದ್ಧಿ ಅಸಾಧ್ಯ

    ದೆಹಲಿ ಗಡಿಯಲ್ಲಿ ರೈತರ ಧರಣಿ ಪ್ರತಿಭಟನೆ ಆರಂಭವಾಗಿದ್ದು, ಕಳೆದ ವರ್ಷ ನವೆಂಬರ್ 26 ರಂದು. ಈ ಪ್ರತಿಭಟನೆಯ ನೇತೃತ್ವವನ್ನು ಎಸ್​ಕೆಎಂ ಮತ್ತು ಭಾರತೀಯ ಕಿಸಾನ್ ಯೂನಿಯನ್ ವಹಿಸಿಕೊಂಡಿದೆ. ಮಾರ್ಚ್ 6 ಕ್ಕೆ ಈ ಹೋರಾಟಕ್ಕೆ ನೂರು ದಿನಗಳು ಪೂರೈಸಲಿವೆ.

    “ಈ ನೂರು ದಿನಗಳ ನಂತರ, ನಮ್ಮ ಚಳುವಳಿಯು ಸರ್ಕಾರದ ಮೇಲೆ ನೈತಿಕ ಒತ್ತಡ ಹಾಕಲಿದೆ. ಸರ್ಕಾರ ನಮ್ಮೊಂದಿಗೆ ಮತ್ತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳಿಗೆ ಒಪ್ಪುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಎಸ್​ಕೆಎಂನ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ. ಜೊತೆಗೆ, “ಇನ್ನೂ ಹೆಚ್ಚಿನ ಸಮಯದ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ” ಎಂದಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೊಸ ಕೃಷಿ ಕಾಯ್ದೆ ಐಚ್ಛಿಕ: ಹಳೇ ವ್ಯವಸ್ಥೆಯೂ ಮುಂದುವರಿಕೆ, ಆಯ್ಕೆ ರೈತರಿಗೆ ಸೇರಿದ್ದು…

    ತವರಿಗೆ ಹೋಗುವ ಬಗ್ಗೆ ವಾಗ್ವಾದ : ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಮಹಿಳೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts