More

  ರೈತರ ಹಿತಾಸಕ್ತಿ ಕಾಪಾಡಲು ಬದ್ಧ

  ಅಥಣಿ: ರಾಜ್ಯದಲ್ಲಿ ಸಹಕಾರ ತತ್ತ್ವದ ಆಧಾರದ ಮೇಲೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಹೆಚ್ಚಿನ ದರ ನೀಡಿ ರೈತರ ಹಿತಾಸಕ್ತಿ ಕಾಪಾಡಲು ಶ್ರಮಿಸಿದೆ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

  ಪಟ್ಟಣದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 22ನೇ ಬಾಯ್ಲರ್ ಪ್ರದೀಪನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಅತ್ಯಲ್ಪ ಮಳೆ ಹಾಗೂ ಕಬ್ಬು ಇಳುವರಿ ಕುಸಿತ ನಡುವೆಯೂ ಕನಿಷ್ಠ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಿದರೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ. ಕೃಷ್ಣಾ ಸಕ್ಕರೆ ಕಾರ್ಖಾನೆ ತೂಕದಲ್ಲಿ ಮೋಸ ಮಾಡುವುದಿಲ್ಲ ಎಂದು ರೈತರು ತಿಳಿಯಬೇಕು ಎಂದರು.

  ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಮಾತನಾಡಿ, ನುಡಿದಂತೆ ನಡೆದುಕೊಂಡು ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಖಾನೆಗೆ ಹಾನಿಯಾದರೂ ಕೂಡ ಬೆಂಬಲ ಬೆಲೆ ನೀಡಿದ್ದೇವೆ. ಮುಂಬರುವ ವರ್ಷ ಎಥೆನಾಲ್ ಘಟಕ ಸ್ಥಾಪಿಸಿ ಅದರಿಂದ ಬರುವ ಲಾಭದಿಂದ ರೈತರಿಗೆ ಇನ್ನಷ್ಟು ಹೆಚ್ಚಿನ ದರ ಕೊಡಲು ನಿರ್ಧರಿಸಿದ್ದೇವೆ ಎಂದರು.

  ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ರೈತರಿಗೆ ಹಲವಾರು ಆಶ್ವಾಸನೆ ನೀಡಿದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಸರಿಯಾದ ಬಿಲ್ ನೀಡಿಲ್ಲ. ಆದರೆ, ಕೃಷ್ಣಾ ಕಾರ್ಖಾನೆ ಬಿಲ್ ಜತೆಗೆ ಬೆಂಬಲ ಬೆಲೆಯನ್ನು ನೀಡಿದೆ ಎಂದರು.

  ಹಲ್ಯಾಳದ ಗುರುಸಿದ್ಧ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೊಡೆ, ನಿರ್ದೇಶಕರಾದ ಗುರಬಸು ತೇವರಮನಿ, ಶಾಂತಿನಾಥ ನಂದೇಶ್ವರ, ಗುಳಪ್ಪ ಜತ್ತಿ, ಸೌರಭ ಪಾಟೀಲ, ವಿಶ್ವನಾಥ ಪೊಲೀಸ್‌ಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೋಟಖಿಂಡಿ, ಎಸ್.ಎಚ್,ನಾಯಿಕ, ಎಚ್.ಐ.ಜಗದೇವ, ಸುನಂದಾ ನಾಯಿಕ, ರುಕ್ಮಿಣಿ ಕುಲಕರ್ಣಿ, ರೈತ ಮುಖಂಡರಾದ ಮಲ್ಲೇಶ ಸವದಿ, ದುಂಡಪ್ಪ ಅಸ್ಕಿ, ಶ್ರೀಶೆಲ ನಾಯಿಕ, ಜಡೆಪ್ಪ ಕುಂಬಾರ ಇತರರಿದ್ದರು. ಕಚೇರಿ ಅೀಕ್ಷಕ ಸುರೇಶ ಠಕ್ಕಣ್ಣವರ ಸ್ವಾಗತಿಸಿದರು. ಎ.ಸಿ.ರಾಚಪ್ಪನವರ ವಂದಿಸಿದರು.

  See also  ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ವಿರೋಧ ; ಗೆಜೆಟ್ ಪ್ರತಿಗಳನ್ನು ಸುಟ್ಟು ರೈತ ಪ್ರತಿಭಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts