More

    ರೈತರ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆ ಪೂರಕ: ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಹೇಳಿಕೆ

    ಮೊಳಕಾಲ್ಮೂರು: ರೈತರ ಸಬಲೀಕರಣದ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯವು ತುಂಬಾ ಸಹಕಾರಿಯಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಂ.ಡಿ.ಮಂಜುನಾಥ್ ತಿಳಿಸಿದರು.

    ತಾಲೂಕಿನ ದೇವಸಮುದ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಯಂತ್ರೋಪಕರಣಗಳಿಗೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಾನುವಾರು ಸಂತತಿ ಕಡಿಮೆಯಾಗಿ ರೈತರು ಭೂಮಿ ಉಳುಮೆ ಮಾಡಲು ಎತ್ತುಗಳ ಕೊರತೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆಯಲ್ಲಿ ಕೊಡುತ್ತಿರುವುದು ವರದಾನವಾಗಿದೆ ಎಂದರು.

    ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಮಾತನಾಡಿ, ಭಾರತವು ಕೃಷಿ ಪ್ರಧಾನ ದೇಶ. ಅನ್ನದಾತರ ಏಳಿಗೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಕೇಂದ್ರದ ವ್ಯವಸ್ಥಾಪಕ ಬೋರಯ್ಯ, ಮುಖಂಡರಾದ ಎ.ಟಿ.ಬಸವರಾಜ್, ಎನ್.ವೈ.ಚೇತನ, ಎಚ್.ವಿ.ನಾಗೇಶರಡ್ಡಿ, ಗೋವಿಂದಪ್ಪ, ಬಸವರಾಜ್, ಹೊನ್ನೂರಸ್ವಾಮಿ, ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts