More

    ಮೇವಿನ ಪ್ರಮಾಣ ಹೆಚ್ಚಿಸುವಂತೆ ರೈತ ಸಂಘ ಮನವಿ


    ಚಾಮರಾಜನಗರ: ಹನೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಸುವಂತೆ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರನ್ನು ಭಾನುವಾರ ಭೇಟಿಯಾಗಿ ಮನವಿ ಮಾಡಿದರು.


    ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ರೈತರು ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ತಾಲೂಕಿನ 6 ಗ್ರಾಮಗಳಲ್ಲಿ ಮಾತ್ರ ತಾತ್ಕಾಲಿಕ ಗೋಶಾಲೆಗಳನ್ನು ತೆರೆದು ಮೇವು ವಿತರಿಸುತ್ತಿದೆ. ಆದರೆ, ಇನ್ನು ಬಹುತೇಕ ಗ್ರಾಮಗಳಲ್ಲಿ ಮೇವಿಗೆ ತುಂಬ ಸಮಸ್ಯೆ ಇದೆ. ಆದ್ದರಿಂದ ಈ ಬಗ್ಗೆ ಸಮೀಕ್ಷೆ ನಡೆಸಿ ಮೇವಿನ ಸಮಸ್ಯೆ ಇರುವ ಗ್ರಾಮಗಳಲ್ಲಿ 1 ಕಿ.ಮೀ ಅಂತರದಲ್ಲಿ ಗೋಶಾಲೆ ಸ್ಥಾಪನೆ, ಇಲ್ಲವೇ ಗ್ರಾಮಕ್ಕೆ ಮೇವನ್ನು ಪೂರೈಸಬೇಕು. ಜತೆಗೆ ಈಗಾಗಲೇ ಪ್ರತಿ ಜಾನುವಾರುಗಳಿಗೆ ನೀಡುತ್ತಿರುವ 6 ಕೆ.ಜಿ.ಮೇವು ಸಾಕಾಗುತ್ತಿಲ್ಲ. ಬದಲಾಗಿ ಕನಿಷ್ಠ 15 ಕೆ.ಜಿ ಮೇವು ನೀಡಬೇಕು. ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಗೋ ಶಾಲೆಯಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.


    ಇದಕ್ಕೆ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ತಲೆದೊರಿರುವ ಮೇವು ಹಾಗೂ ನೀರಿನ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಗಿದೆ. ಈ ದೆಸೆಯಲ್ಲಿ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಸರ್ವೇ ಕಾರ್ಯನಡೆಸಿದ್ದು, ತಾಲೂಕಿನಲ್ಲಿ 13 ಗ್ರಾಮಗಳಲ್ಲಿ ಗೋ ಶಾಲೆ ತೆರೆಯಲು ನಿರ್ಧರಿಸಲಾಗಿದೆ. ಪ್ರಸ್ತುತ 9 ಗ್ರಾಮಗಳಲ್ಲಿ ಗೋ ಶಾಲೆ ತೆರೆದು ಮೇವನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಗ್ರಾಮಗಳಲ್ಲೂ ಗೋಶಾಲೆ ತೆರೆಯಲಾಗುವುದು. ಮೇವಿನ ಪ್ರಮಾಣ ಹೆಚ್ಚಿಸುವ ಸಂಬಂಧ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.


    ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಪದಾಧಿಕಾರಿಗಳಾದ ಭೈರನತ್ತ ರಾಜು, ಮಲ್ಲಯ್ಯನಪುರದ ಚಿಕ್ಕರಾಜು, ಉಮೇಶ್, ಶಾಂತಕುಮಾರ್, ಪ್ರದೀಪ್‌ಕುಮಾರ್, ಶ್ರೀನಿವಾಸ್, ಪ್ರಭು ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts