More

    ರೈತ ಹೋರಾಟದಲ್ಲಿ ಹೈ ಡ್ರಾಮ! ನಮ್ಮನ್ನು ಕೊಲೆ ಮಾಡಲು ಪ್ಲ್ಯಾನ್​ ಮಾಡಲಾಗಿದೆಯೆಂದು ಸುಳ್ಳು ಹೇಳಿಸಿದ ರೈತರು?!

    ನವದೆಹಲಿ: ಕಳೆದ ಎರಡು ತಿಂಗಳಿನಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಗಣರಾಜ್ಯೋತ್ಸವ ದಿನದಂದು ಬೃಹತ್​ ರ್ಯಾಲಿ ನಡೆಸಲು ರೈತರು ಸಿದ್ಧವಾಗಿದ್ದಾರೆ. ಆದರೆ ಆ ದಿನದಂದು ಗ್ಯಾಂಗ್​ ಒಂದು ರೈತರ ಮೇಲೆ ದಾಳಿ ನಡೆಸಿ, ನಾಲ್ವರನ್ನು ಗುಂಡಿಕ್ಕಿ ಕೊಲ್ಲಲು ಯೋಜನೆ ಹಾಕಿಕೊಂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ. ಸುಪಾರಿ ಪಡೆದಿರುವ ಗ್ಯಾಂಗ್​ ಅವನು ಎಂದು ಒಬ್ಬ ಮುಖ ಮುಚ್ಚಿಕೊಂಡಿರುವ ವ್ಯಕ್ತಿಯನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಿದ್ದಾರೆ. ಆದರೆ ಈ ಆರೋಪದಲ್ಲಿ ಇದೀಗ ಬಿಗ್​ ಟ್ವಿಸ್ಟ್​ ಎದುರಾಗಿದೆ. ಸಂಬಂಧಿಕರನ್ನು ನೋಡಲು ಬಂದ ನನ್ನನ್ನು ಥಳಿಸಿ, ಸುಳ್ಳು ಕಥೆ ಹೇಳಿಸಿದ್ದಾರೆ ಎಂದು ಆ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.

    ಇದನ್ನೂ ಓದಿ: ಹಿಂಬದಿಯಿಂದ ಬಂದವ ಪತ್ನಿ ತಲೆಗೆ ಮಚ್ಚು ಬೀಸಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡ! ನಡುರಸ್ತೆಯಲ್ಲೇ ದಂಪತಿ ನರಳಾಟ

    ದೆಹಲಿಯಲ್ಲಿರುವ ನನ್ನ ಸಂಬಂಧಿಗೆ ಮಗುವಾಗಿತ್ತು. ಮಗುವನ್ನು ನೋಡಲೆಂದು ನಾನು ಸೋನಿಪತ್​ನಿಂದ ದೆಹಲಿಗೆ ಬಂದೆ. ಬಸ್ಸಿಳಿದು ಬರುತ್ತಿದ್ದಾಗ ಯಾರೋ ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದರು. ಅದೇ ಆರೋಪದಲ್ಲಿ ನನ್ನನ್ನೂ ಎಳೆದೊಯ್ದ ಕೆಲವರು ಯಾವುದೋ ಒಂದು ಕ್ಯಾಪ್​ನಲ್ಲಿ ನನ್ನ ಬಟ್ಟೆ ಬಿಚ್ಚಿ ಹೊಡೆದರು. ನೀನು ಅದಾದ ಮೇಲೆ ಉಲ್ಟಾ ನೇತಾಡಿಸಿ ಬೆಲ್ಟ್​ನಲ್ಲಿ ಹೊಡೆದರು. ಮಾರನೇ ದಿನ ನಾವು ಹೇಳಿದಂತೆ ಹೇಳು ಎಂದು ಹೇಳಿದರು. ಊಟ ಕೊಟ್ಟು, ನಂತರ ವಿಡಿಯೋ ಮಾಡಿಸಿದರು. ನನ್ನ ಜತೆ ಸಾಗರ್​ ಹೆಸರಿನ ಯುವಕನನ್ನೂ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಸಾಗರ್​ ಹಿಂದಿನ ದಿನವೇ ಅಲ್ಲಿಂದ ಓಡಿ ಹೋಗಿದ್ದ. ಮಾರನೇ ದಿನ ಬೆಳಗ್ಗೆ ಅವರು ಸಾಗರ್​ನನ್ನು ಕೊಲೆ ಮಾಡಿದ್ದಾಗಿ ಹೇಳಿದರು. ನೀನು ನಾವು ಹೇಳಿದಂತೆ ಕೇಳದಿದ್ದರೆ ನಿನ್ನನ್ನೂ ಕೊಲೆ ಮಾಡುತ್ತೇವೆ ಎಂದರು.

    ಇದನ್ನೂ ಓದಿ: ಅತ್ತೆ ಸೊಸೆ ಫೇಸ್​ಬುಕ್​ ವಾರ್​! ಅನ್​ಫ್ರೆಂಡ್​ ಮಾಡಿದ ಸೊಸೆಯನ್ನು ಮನೆಯೊಳಗೆ ಸೇರಿಸದ ಅತ್ತೆ ಮಾವ

    ಅದಾದ ಮೇಲೆ ನನ್ನನ್ನು ಪ್ರೆಸ್​ ಮೀಟ್​ನಲ್ಲಿ ಕೂರಿಸಲಾಯಿತು. 10 ಜನರ ಗ್ಯಾಂಗ್​ ಎಂದು ಹೇಳು, ಕೊಲೆ ಮಾಡಲು ಸಂಚು ಹಾಕಿದ್ದೆವೆಂದು ಹೇಳು ಎಂದು ಕಥೆ ಹೇಳಲಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಒತ್ತಾಯ ಪೂರ್ವಕವಾಗಿ ನನ್ನಿಂದ ಸುಳ್ಳು ಕಥೆ ಹೇಳಿಸಲಾಯಿತು ಎಂದು ಆತ ತಿಳಿಸಿದ್ದಾನೆ. ಹರಿಯಾಣ ಪೊಲೀಸರ ವಶದಲ್ಲಿರುವ ಯುವಕ ಪೊಲೀಸರ ಮುಂದೆ ಈ ಎಲ್ಲ ವಿಚಾರಗಳನ್ನು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)

    ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

    ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts