More

    ಕಾಡಿನೊಳಗೇ ನಡೆಯುತ್ತಿರುವ ನಾಟಾ ದಂಧೆಗೆ ಕಡಿವಾಣ ಹಾಕಿ

    ಎನ್.ಆರ್.ಪುರ: ಸಣ್ಣಪುಟ್ಟ ರೈತರು ಚಿಕ್ಕದಾಗಿ ಮನೆ ಕಟ್ಟಿಕೊಂಡರೂ ತೊಂದರೆ ಕೊಡುತ್ತೀರಿ. ಆದರೆ ಕಾಡು ರಕ್ಷಣೆ ಆಗುತ್ತಿರುವುದೇ ಇವರಿಂದ. ಮೊದಲು ಕಾಡಿನೊಳಗೆ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ಎಂದು ತಾಪಂ ಅಧ್ಯಕ್ಷೆ ಇ.ಸಿ.ಜಯಶ್ರೀ ಮೋಹನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

    ಕಾಡೊಳಗೆ ಹೋದರೆ ಬರೀ ಬಯಲೇ ಕಾಣುತ್ತದೆ. ಕಾಡಿನೊಳಗೆ ಅಕ್ರಮ ನಾಟಾ ದಂಧೆ ನಡೆಯುತ್ತಿದೆ. ಅರಣ್ಯ ಇಲಾಖೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದೆಯೇ?. ಅರಣ್ಯಕ್ಕೆ ಬೆಂಕಿ ಬಿದ್ದಾಗ ನೆರವಿಗೆ ಬರುವವರೇ ಸಣ್ಣ ರೈತರು. ಇವರಿಗೆ ತೊಂದರೆ ಕೊಡುವುದು ಬೇಡ. ಮಾನವೀಯ ನೆಲೆಗಟ್ಟಿನ ಮೇಲೆ ಸಹಕಾರ ನೀಡಿ ಎಂದು ಸೋಮವಾರ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದರು.

    ಮೀನುಗಾರರು ತಮ್ಮ ಜೀವನೋಪಾಯಕ್ಕೆ ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಪರಿಸರವಾದಿಗಳ ಮಾತು ಕೇಳಿ ಅವರಿಗೆ ತೊಂದರೆ ಕೊಡುತ್ತಿದ್ದೀರಿ. ಆದರೆ ಮೀನುಗಾರರು ಅತಿವೃಷ್ಟಿ ಸಂಭವಿಸಿದಾಗ ಜನರನ್ನು ಹಾಗೂ ಜಾನುವಾರು ರಕ್ಷಿಸಲು ನಾವು ಬೇಕು. ಹಾಗಿದ್ದರೆ ಪರಿಸರವಾದಿಗಳ ಸಹಕಾರವನ್ನೇ ಪಡೆಯಿರಿ ಎಂದು ಮೀನುಗಾರರು ನಮಗೆ ಹೇಳುತ್ತಿದ್ದಾರೆ. ವಿನಾಕಾರಣ ಅವರಿಗೆ ತೊಂದರೆ ನೀಡಬೇಡಿ ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts