More

    ಹಳದಿ ಕಲ್ಲಂಗಡಿ ಬೆಳೆಯಲ್ಲಿ ಸಾಧನೆ ತೋರಿದ ಕಲಬುರಗಿ ಯುವಕ; ವೈವಿಧ್ಯತೆ ಹುಡುಕಿದರೆ ಲಾಭವಿದೆಯೆಂದ ಕೃಷಿಕ

    ಕಲಬುರಗಿ: ಕಲ್ಲಂಗಡಿ ಹಣ್ಣಿನ ಸೀಸನ್​ ಆರಂಭವಾಗಿದೆ. ಈ ವರ್ಷ ಕೆಂಪು ಕಲ್ಲಂಗಡಿಯ ಹಾಗೆಯೇ ಹಳದಿ ಕಲ್ಲಂಗಡಿ ಕೂಡ ಹೆಚ್ಚಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೃಷಿಯಲ್ಲಿ ವೈವಿಧ್ಯತೆ ಕಂಡುಕೊಂಡರೆ ಮಾತ್ರವೇ ಲಾಭ ಸಾಧ್ಯ ಎನ್ನುತ್ತಾರೆ ಕಲಬುರಗಿಯ ಪದವೀಧರ ಕೃಷಿಕ ಬಸವರಾಜ್​ ಪಾಟೀಲ್​.

    ಬಸವರಾಜ್​ ಪಾಟೀಲ್​ ಕಲಬುರಗಿಯ ಕೊರಳ್ಳಿ ಗ್ರಾಮದವರು. ವಿದ್ಯಾಭ್ಯಾಸದಲ್ಲಿ ಪದವಿ ಪಡೆದಿರುವ ಇವರು ಯಾವುದೇ ಕಂಪನಿಯಲ್ಲಿ ತಿಂಗಳ ಸಂಬಳಕ್ಕೆ ಸೇರದೆಯೇ ಕೃಷಿಯತ್ತ ಮುಖ ಮಾಡಿದರು. ಮಾಮೂಲಿ ಕೃಷಿಗಿಂತ ಬೇರೆ ರೀತಿಯ ಕೃಷಿ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಅರಿತು ಹಳದಿ ಕಲ್ಲಂಗಡಿ ಬೆಳೆಯುವ ಯೋಜನೆ ಹಾಕಿಕೊಂಡರು.

    ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಹಳದಿ ಕಲ್ಲಂಗಡಿ ಗಿಡವನ್ನು ವೈಜ್ಞಾನಿಕವಾಗಿ ಬೆಳೆಸಿದ್ದಾರೆ. ಕಲ್ಲಂಗಡಿ ಸೀಸನ್​ ಆರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಒಂದು ಲಕ್ಷ ರೂಪಾಯಿ ವ್ಯಾಪಾರವಾಗಿದೆಯಂತೆ. ಬಂಡವಾಳಕ್ಕಿಂತ ಹೆಚ್ಚಿನ ಲಾಭ ಬಂದೇ ಬರುತ್ತದೆ ಎನ್ನುವ ನಂಬಿಕೆ ಬಸವರಾಜ್​ ಕುಟುಂಬದಲ್ಲಿ ಮೂಡಿದೆ. ಸ್ಥಳೀಯ ಮಾರುಕಟ್ಟೆ ಹಾಗೂ ಬಿಗ್​ ಬಜಾರ್​ನಲ್ಲಿ ಈ ಹಳದಿ ಕಲ್ಲಂಗಡಿಯನ್ನು ಮಾರಾಟ ಮಾಡುತ್ತಿದ್ದಾರೆ ಬಸವರಾಜ್​. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಾರ್ಟೂನ್​ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಕ್ಕೂ ಹಿಜಾಬ್​ ಕಡ್ಡಾಯ!

    ಬಿಎಂಸಿಯ ಮಾಸ್ಕ್​ ಕಲೆಕ್ಷನ್​ 30 ಕೋಟಿ ರೂಪಾಯಿ! ಒಂದೇ ದಿನದಲ್ಲಿ 46 ಲಕ್ಷ ರೂ. ಕಲೆಕ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts