More

    26ಕ್ಕೆ ಬೀಸುವಿನಿಂದ ತೀರ್ಥಹಳ್ಳಿಗೆ ಪಾದಯಾತ್ರೆ

    ತೀರ್ಥಹಳ್ಳಿ: ತಾಲೂಕಿನ ಬೀಸು ಗ್ರಾಮದಲ್ಲಿ ಅಡಕೆ ಸಸಿಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿ ವಲಯ ಅರಣ್ಯಾಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಡಿ.26ರಂದು ಬೀಸು ಗ್ರಾಮದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

    ಕ್ಷೇತ್ರದ ಶಾಸಕರು ಹಾಗೂ ಬೆಂಬಲಿಗರ ಕುಮ್ಮಕ್ಕಿನಿಂದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಭ್ಯರ್ಥಿ ರಂಜನ್ ಕುಮಾರ್ ಪತ್ನಿಯನ್ನು ಬೆದರಿಸಿ ಚುನಾವಣಾ ಕಣದಿಂದ ಹಿಂದೆ ಸರಿಸಲು ಅರಣ್ಯ ಇಲಾಖೆ ಅಧಿಕಾರಿ ಮೂಲಕ ಈ ಕೃತ್ಯ ನಡೆಸಲಾಗಿದೆ. ಈ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶಾಸಕರ ಹೇಳಿಕೆ ಜನರ ಕಣ್ಣೊರೆಸುವ ತಂತ್ರಗಾರಿಕೆ. ವಲಯ ಅರಣ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹತ್ತಾರು ವರ್ಷಗಳಿಂದ ನೆಟ್ಟು ಬೆಳೆಸಿರುವ ಎರಡು ವರ್ಷದ 2,000 ಅಡಕೆ ಸಸಿ ಹಾಗೂ ಡ್ರಿಪ್ ಪೈಪ್​ಗಳನ್ನು ಧ್ವಂಸಗೊಳಿಸಲಾಗಿದೆ. ತಾಲೂಕಿನ ಕೋಣಂದೂರು, ಹಾದಿಗಲ್ಲು, ಹೆಗಲತ್ತಿ, ಹೆಗ್ಗೋಡು, ಹೆದ್ದೂರು, ನಗರ ಮತ್ತು ಹುಂಚ ಹೋಬಳಿಯ ಅನೇಕ ಕಡೆ ಕಾಂಗ್ರೆಸ್ ಬೆಂಬಲಿಗ ಒತ್ತುವರಿ ರೈತರನ್ನು ಗುರಿಯಾಗಿಸಿ ಸುಳ್ಳು ಕೇಸ್​ಗಳನ್ನು ಹಾಕಿ ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.

    ಚುನಾವಣೆ ಮುಗಿದ ನಂತರ ರಂಜನ್ ಕುಮಾರ್ ಕುಟುಂಬಕ್ಕೆ ವಲಯ ಅರಣ್ಯಾಧಿಕಾರಿ ಬೆದರಿಕೆ ಹಾಕುತ್ತಿದ್ದರೂ ಶಾಸಕ ಆರಗ ಜ್ಞಾನೇಂದ್ರ ಮೌನವಾಗಿರುವುದು ಆಶ್ಚರ್ಯ ತರಿಸಿದೆ. ನೊಂದ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಲು ಪಾದಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts