More

    64ನೇ ಜನ್ಮ ದಿನ ಸಂಭ್ರಮಾಚರಣೆಯಲ್ಲಿ ಎಚ್​.ಡಿ ಕುಮಾರಸ್ವಾಮಿ; ಎದೆ ಮೇಲಿನ ಎಚ್​ಡಿಕೆ ಹಚ್ಚೆಗೆ ಎಳನೀರಿನ ಅಭಿಷೇಕ ಮಾಡಿದ ಅಭಿಮಾನಿ

    ಬಾಗಲಕೋಟೆ: ಡಿ.16 ರಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಚ್​​ಡಿಕೆ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ‌ ಮಾಡಿದ್ದಾರೆ. ಈ ಕುರಿತಾಗದ ವಿಡಿಯೋ ಶೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ರಾಜು ಶೆಲ್ಲಿಕೇರಿ, ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ.  ಎಚ್.ಡಿಕೆ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜು 15 ವರ್ಷಗಳ ಹಿಂದೆ ಎದೆಯ ಮೇಲೆ ಎಚ್​​ಡಿಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

    ಮಧ್ಯರಾತ್ರಿ 12ಗಂಟೆಗೆ ಎಚ್.ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಲಾಗಿದೆ. ಎದೆಯ ಮೇಲೆ ಹಾಕಿಸಿಕೊಂಡಿದ್ದ ಎಚ್​​ಡಿಕೆ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿ, ಕೇಕ್ ತಿನ್ನಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ರಾಜು ಶೆಲ್ಲಿಕೇರಿ ವಿದ್ಯಾಗಿರಿಯ ಜ್ಯೋತಿ ಕಾಲನಿ ಬಳಿ ಪಾನ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 15 ವರ್ಷಗಳಿಂದ ಎಚ್.ಡಿಕೆ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸ್ತಾ ಬಂದಿರುವ ಅಭಿಮಾನಿ, ಈ ಬಾರಿ ಎದೆಯ‌ ಮೇಲಿನ ಅಚ್ಚೆಗೆ ಎಳೆನೀರು ಅಭಿಷೇಕ, ಸಿಹಿ (ಕೇಕ್) ಹಂಚಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts