More

    ಮನೆ ನಿರ್ಮಾಣಕ್ಕೆ ಒತ್ತಾಯಿಸಿ ಧರಣಿ ಕುಳಿತ ಕುಟುಂಬ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಕಳೆದ ವರ್ಷದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕೋಡಬಾಳ ಗ್ರಾಮದ ಕುಟುಂಬವೊಂದು ಮನೆ ನಿರ್ವಿುಸಿಕೊಡಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

    ತಾಲೂಕಿನ ಕೋಡಬಾಳ ಗ್ರಾಮದ ಬಸವಣ್ಣೆಯ್ಯ ಚರಂತಿಮಠ ಎಂಬುವರು ತಾಯಿ, ಪತ್ನಿ ಹಾಗೂ ಮಗನೊಂದಿಗೆ ತಹಸೀಲ್ದಾರ್ ಕಚೇರಿ ಎದುರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು. ನಂತರ ಸಮಸ್ಯೆ ಬಗೆಹರಿಸುವ ಕುರಿತು ತಹಸೀಲ್ದಾರ್ ಶಂಕರ್ ಜಿ.ಎಸ್. ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.

    ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ಮೊದಲು ಮನೆಯ ಒಂದು ಭಾಗ ಬಿದ್ದಿತ್ತು. ಆಗ ಅಧಿಕಾರಿಗಳು 50 ಸಾವಿರ ರೂ. ಪರಿಹಾರ ನೀಡಿದರು. ಈ ಪರಿಹಾರ ಬರುವಷ್ಟರಲ್ಲಿಯೇ ಮನೆ ಪೂರ್ಣ ಬಿದ್ದಿತು. ಮನೆ ಸಂಪೂರ್ಣ ಹಾನಿಯಾಗಿದ್ದರಿಂದ ಮನೆ ಹಾನಿಯ ಪಟ್ಟಿಯಲ್ಲಿ ಇದನ್ನು ‘ಎ’ ಕೆಟಗರಿಯಲ್ಲಿ ಸೇರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ವಿನಂತಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈವರೆಗೆ ಹೆಚ್ಚಿನ ಪರಿಹಾರವೂ ಬಂದಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಂಕರ ಜಿ.ಎಸ್., ನಾಳೆಯೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಗ್ರಾಮದ ಪ್ರಮುಖರಾದ ಲೋಕೇಶ ಕುಬಸದ, ಮಲ್ಲಿಕಾರ್ಜುನಯ್ಯ ಮಠಪತಿ, ಜಗದೀಶ ಚರಂತಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts