More

  ಕುಟುಂಬ ಏಳಿಗೆಗೆ ಮಹಿಳೆ ಜೀವನ ಮುಡಿಪು

  ಸಂಕೇಶ್ವರ: ತಾಯಿ, ಅತ್ತೆ, ಸೊಸೆ, ಮಗಳು, ಪತ್ನಿ ಹೀಗೆ ಹಲವಾರು ರಂಗಗಳಲ್ಲಿ ಮಹಿಳೆ ತನ್ನ ಪಾತ್ರ ನಿಭಾಯಿಸುವುದರೊಂದಿಗೆ ಕುಟುಂಬ ಸದಸ್ಯರ ಏಳಿಗೆಗೆ ಸಂಪೂರ್ಣ ತನ್ನ ಜೀವನವನ್ನು ಮುಡಿಪಾಗಿಟ್ಟಿರುತ್ತಾಳೆ ಎಂದು ಪ್ರಾಧ್ಯಾಪಕಿ ಡಾ.ಜಯಶ್ರೀ ನಾಗರಾಳೆ ಹೇಳಿದರು.

  ಸಮೀಪದ ನಿಡಸೋಸಿ ಪಾಲಿಟೆಕ್ನಿಕ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ನಿವೃತ್ತ ಉಪನ್ಯಾಸಕಿ ಗಿರಿಜಾ ಖಡೇದ ಮಾತನಾಡಿ, ಸಮಾಜದಲ್ಲಿ ಮಹಿಳೆಯರ ಪಾತ್ರ ವಿಶೇಷವಾದುದು ಎಂದರು.

  ಸುನಿತಾ ಪವಾರ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮಹಿಳೆಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದರು. ಪ್ರಾಚಾರ್ಯ ಬಿ.ಆರ್.ಉಮರಾಣಿ ಮಾತನಾಡಿ, ಮಹಿಳೆಯರು ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸರಿ ಸಮನಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

  ಮುಸ್ಕಾನ್ ಮುಲ್ಲಾ ಸ್ವಾಗತಿಸಿದರು. ಸುಪ್ರಿಯಾ ಹಿರೇಮಠ ವಂದಿಸಿದರು. ಪೂಜಾ ಗೋಣಿ ಮತ್ತು ದಾನೇಶ್ವರಿ ಹೊಸಮಠ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts