More

    ಕುಟುಂಬದವರೊಂದಿಗೆ ಕಚೇರಿ ಮುಂದೆ ಮೇಲ್ವಿಚಾರಕಿ ಧರಣಿ

    ಬೆಳಗಾವಿ: ರಾಮದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಬೆಳಗಾವಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಕುಟುಂಬ ಸಮೇತ ಶುಕ್ರವಾರದಿಂದ ಧರಣಿ ಆರಂಭಿಸಿದ್ದಾರೆ.

    ಉಮಾದೇವಿ ಬೆನ್ನಪ್ಪ ವೆಂಕಟಗಿರಿ, ಕುಟುಂಬದವರೊಂದಿಗೆ ಧರಣಿ ನಡೆಸುತ್ತಿರುವ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ. ತಾಯಿ ಶಾರದಾಬಾಯಿ ವೆಂಕಟಗಿರಿ, ಸಹೋದರರಾದ ರಾಮರೂಢ ವೆಂಕಟಗಿರಿ, ಪವಕುಮಾರ ವೆಂಕಟಗಿರಿ ಧರಣಿಗೆ ಸಾಥ್ ನೀಡಿದ್ದಾರೆ. 2020ರ ಸೆಪ್ಟೆಂಬರ್ 5ರಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಿಂದ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ನನ್ನನ್ನು ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ಸೆ. 18ರಂದು ಮಾಗಡಿ ತಾಲೂಕು ಕಾರ್ಯಾಲಯವು ಇವರನ್ನು ಬಿಡುಗಡೆ ಗೊಳಿಸಿತ್ತು. ಅಲ್ಲಿಂದ ರಾಮದುರ್ಗಕ್ಕೆ ಬಂದರೆ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನನ್ನನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ಹಿಂಬರಹ ಬರೆದು ವಾಪಸ್ ಕಳುಹಿಸಿದ್ದಾರೆ ಎಂದು ಉಮಾದೇವಿ ಅಸಮಾಧಾನ ವ್ಯಕ್ತಪಡಿಸಿದರು.

    ಅಂಗವಿಕಲೆಯೆಂದು ನಿರಾಕರಣೆ: ಸರ್ಕಾರವೇ ವರ್ಗಾವಣೆಗೊಳಿಸಿದ್ದರೂ ರಾಮದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಾನು ಅಂಗವಿ ಕಲೆ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದೀಗ ನನಗೆ ಯಾವ ಕಡೆ ಹೋಗಬೇಕು? ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಹೀಗಾಗಿ ಇಲ್ಲಿ ಧರಣಿ ಮಾಡುತ್ತಲಿದ್ದು, ಕರ್ತವ್ಯಕ್ಕೆ ಸೇರಿಸಿಕೊಳ್ಳುವವರೆಗೂ ಧರಣಿ ನಡೆಸುವುದಾಗಿ ಉಮಾದೇವಿ ತಿಳಿಸಿದರು.

    ಸಹೋದರ ಪವನಕುಮಾರ ವೆಂಕಟಗಿರಿ ಮಾತನಾಡಿ, ಉಮಾದೇವಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ಅಲ್ಲದೆ, ಅಂಗವಿಕಲೆಯಾಗಿದ್ದಾರೆ.

    ಆದರೂ ಇಲಾಖೆಯ ಹಿರಿಯ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಅಲೆದಾಡಿಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಕೆಡುತ್ತಿದೆ. ಹೀಗಾಗಿ ಧರಣಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    ರಾಮದುರ್ಗ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಅವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು.
    | ಎಚ್.ವಿ. ದರ್ಶನ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts