More

    ಅವರಿಗೆ ಕುಟುಂಬವೇ ಮೊದಲು: ಮಹಾಮೈತ್ರಿ ಸಭೆ ನಡುವೆಯೇ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಗುಡುಗು

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಒಕ್ಕೂಟವನ್ನು ಮಣಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ವಿಪಕ್ಷಗಳು ಬೆಂಗಳೂರಿನಲ್ಲಿ ಇಂದು ಮಹಾಮೈತ್ರಿ ಸಭೆ ನಡೆಸುತ್ತಿವೆ. ಇದರ ನಡುವೆಯೇ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಅಂಡಮಾನ್​ ಮತ್ತು ನಿಕೋಬಾರ್​ ರಾಜಧಾನಿ ಪೋರ್ಟ್​ಬ್ಲೇರ್​ನಲ್ಲಿರುವ ವೀರ ಸಾವರ್ಕರ್​ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್​ ಅನ್ನು ಲೋಕಾರ್ಪಣೆಗೊಳಿಸಿ, ಮಾತನಾಡುವ ವಿಪಕ್ಷಗಳ ವಿರುದ್ಧ ಹರಿಹಾಯ್ದರು.

    ಇದನ್ನೂ ಓದಿ: ಮದುವೆಯಾಗಲು ನಾನಿನ್ನೂ ಗರ್ಭಿಣಿಯಾಗಿಲ್ಲ: ವಿವಾಹದ ಬಗ್ಗೆ ನಟಿ ತಾಪ್ಸಿ ಸೆನ್ಸೇಷನಲ್ ಕಾಮೆಂಟ್..

    ವಿಪಕ್ಷಗಳು ಕೇವಲ ಅವರ ಕುಟುಂಬದ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾರೆ ಹೊರತು ದೇಶದ ಮೇಲಲ್ಲ. ಅವರಿಗೆ ಕುಟುಂಬವೇ ಮೊದಲಾಗಿದ್ದು, ದೇಶ ಏನೇನು ಅಲ್ಲ. ಭ್ರಷ್ಟಾಚಾರವೇ ಅವರ ಉದ್ದೇಶ. ಕುಟುಂಬದಿಂದ, ಕುಟುಂಬಕ್ಕೋಸ್ಕರ ಮತ್ತು ಕುಟುಂಬಕ್ಕಾಗಿ ಎಂಬುದೇ ಅವರ ಮಂತ್ರವಾಗಿದೆ ಎಂದು ಪ್ರಧಾನಿ ಮೋದಿ ಗುಡುಗಿದರು.

    ಹೊಸ ಟರ್ಮಿನಲ್​ ಅನ್ನು ಸುಮಾರು 710 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಸುಂದರ ಪ್ರವಾಸಿ ತಾಣದ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಮಾರು 40,800 ಚದರ ಮೀಟರ್‌ನ ಒಟ್ಟು ನಿರ್ಮಿತ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

    ಮಹಾಮೈತ್ರಿ ಸಭೆ

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತತ್ವದಲ್ಲಿ ‘ನಾವೆಲ್ಲ ಒಂದಾಗಿ ನಿಲ್ಲುತ್ತೇವೆ’ ಎಂಬ ಘೋಷವಾಕ್ಯದಡಿ ಬೆಂಗಳೂರಿನಲ್ಲಿ ನಡೆದಿರುವ ವಿಪಕ್ಷಗಳ ಮಹಾಘಟಬಂಧನ್ ಸಭೆ ಇಂದು ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಸೋಮವಾರ ಮಧ್ಯಾಹ್ನ 23 ಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಆದರದಿಂದ ಬರಮಾಡಿಕೊಂಡರು. ರಾತ್ರಿ ವಿಶೇಷ ಭೋಜನ ಕೂಟವೂ ನಡೆಯಿತು. ಇಂದು ಸಭೆ ನಡೆಯುತ್ತಿದ್ದು, ಸಂಜೆ 3 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯವಾಗಲಿದೆ. ಬಳಿಕ ಸಂಜೆ 4 ಗಂಟೆಗೆ ಮೈತ್ರಿಕೂಟದ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ ನಡೆಯಲಿದ್ದು, ಸಭೆಯ ನಿರ್ಣಯಗಳ ಬಗ್ಗೆ ಘೊಷಣೆ ಮಾಡಲಿದ್ದಾರೆ. (ಏಜೆನ್ಸೀಸ್​)

    ವಿಪಕ್ಷಗಳ ಒಗ್ಗಟ್ಟಿನ ಕಹಳೆ: ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ; ಇಂದು ನಿರ್ಣಯ

    ಮಗನ ಕಾಲೇಜು ಶುಲ್ಕಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ತಾಯಿ

    ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ, ವಸ್ತುಗಳು ಬೆಂಕಿಗಾಹುತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts