More

    ಸುಗಂಧಾದೇವಿ ಪಲ್ಲಕಿ ಉತ್ಸವ

    ಬಾವನ ಸೌಂದತ್ತಿ: ಗಡಿ ಪ್ರದೇಶದ ಪ್ರಸಿದ್ಧ ಶಕ್ತಿ ದೇವತೆಯಾದ ಸುಗಂಧಾದೇವಿಯ ಜಾತ್ರೆಯು, ಭವ್ಯ ಪಲ್ಲಕ್ಕಿ ಉತ್ಸವದೊಂದಿಗೆ ಶುಕ್ರವಾರ ವೈಭವದಿಂದ ಜರುಗಿತು.

    ಸುಮಾರು ಅರ್ಧ ಶತಮಾನದ ಇತಿಹಾಸ ಹೊಂದಿರುವ ದೇವಸ್ಥಾನದ ಸುಗಂಧಾ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಹಾನೈವೆದ್ಯ ಪ್ರತಿವರ್ಷ ರಂಗಪಂಚಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಭಕ್ತರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಣ್ಣದಾಟವಾಡಿ ಬಳಿಕ ಕೃಷ್ಣಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನದವರೆಗೆ ಮಡಿ ಬಟ್ಟೆಯಲ್ಲಿ ತೆರಳಿ ದೇವಿಗೆ ಪೂಜಿಸುವುದು ವಾಡಿಕೆ.

    ಹರಕೆ ಹೊತ್ತ ಭಕ್ತರು ಬೆಳಗ್ಗೆ 1 ಗಂಟೆಯಿಂದಲೇ ಕೃಷ್ಣಾನದಿಯಲ್ಲಿ ಮಿಂದು ನದಿಯಿಂದ ಮಡಿ ಬಟ್ಟೆಯಲ್ಲಿ ದೇವಸ್ಥಾನದ ಸುತ್ತ ದೀರ್ಘ ದಂಡ ನಮಸ್ಕಾರದೊಂದಿಗೆ ಭಕ್ತಿ ಸೇವೆ ಸಲ್ಲಿಸಿದರು. ದೇವಿಗೆ ವಿಶೇಷ ಪೂಜೆ, ಅಭಿಷೇಕ, ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ, ದೇವಿಗೆ ಉಡಿ ತುಂಬುವುದು ಇತರ ಧಾರ್ಮಿಕ ಆಚರಣೆಗಳು ನಡೆದವು.

    ಮಾ. 14 ರಂದು ಬೆಳಗ್ಗೆ 9 ಗಂಟೆಗೆ ಓಡುವ ಮತ್ತು ಸೈಕಲ್ ಸ್ಪರ್ಧೆ, 15ರಂದು ಬೆಳಗ್ಗೆ 9 ಗಂಟೆಗೆ ಎತ್ತು ಮತ್ತು ಕುದುರೆ ಗಾಡಿ ಸ್ಪರ್ಧೆ, 16ರಂದು ಸಂಜೆ 4 ಗಂಟಗೆ ಕುಸ್ತಿ ಸ್ಪರ್ಧೆ, 17ರಂದು ಜೋಡೆತ್ತಿನಗಾಡಿ ಸ್ಪರ್ಧೆ ಹಾಗೂ 17ರವರೆಗೆ ದನಗಳ ಜಾತ್ರೆ ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts