More

    ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

    ನವದೆಹಲಿ: ಬಡ ವ್ಯಕ್ತಿಯೊಬ್ಬನ ರಿಕ್ಷಾವನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಕೆಲದಿನಗಳಿಂದ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ದೇಶದ ಅನೇಕ ಜಾಲತಾಣಿಗರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಈ ದೇಶದ ಕಾನೂನು ಕೇವಲ ಬಡವರಿಗೆ ಮಾತ್ರ ಎಂದು ಅಡಿಬರಹ ಬರೆದು, #ಭಾರತ, #ನರೇಂದ್ರಮೋದಿ, #ಬಿಜೆಪಿ ಮತ್ತು #ಅರವಿಂದ್​ಕೇಜ್ರಿವಾಲ್​ ಎಂಬ ಹ್ಯಾಷ್​ಟ್ಯಾಗ್​ನಿಂದ ವಿಡಿಯೋ ವೈರಲ್​ ಮಾಡಿದ್ದಾರೆ.

    ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಘಟನೆಯ ಸತ್ಯಾಂಶ ಹೊರಬಂದಿದ್ದು, ತಪ್ಪು ಪ್ರಚಾರಕ್ಕಾಗಿ ಈ ವಿಡಿಯೋ ಮಾಡಿದ್ದಾರೆಂದು ತಿಳಿದುಬಂದಿದೆ. ರಿಕ್ಷಾ ವಶಕ್ಕೆ ಪಡೆದಿರುವ ಘಟನೆ ನಡೆದಿದ್ದು ಭಾರತದಲ್ಲಲ್ಲ, ಬದಲಾಗಿ ಪಕ್ಕದ ಬಾಂಗ್ಲಾದೇಶದಲ್ಲಿ. ಢಾಕಾದ ಸರ್ಕಾರಿ ಅಧಿಕಾರಿಗಳು ಈ ಅಮಾನವೀಯ ಕೆಲಸ ಮಾಡಿದವರು.

    ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಮಿತ್ರಪಕ್ಷಗಳ ಸಂಖ್ಯೆ ಇಳಿಕೆ!: ಅಠವಳೆ ಬಿಟ್ಟು ಉಳಿದೆಲ್ಲ ಸಚಿವರು ಬಿಜೆಪಿಯವರು

    ವಿಡಿಯೋದಲ್ಲಿ ಗಮನಹರಿಸಲಾಗ ಕೆಲವು ಪದಗಳು ಬಾಂಗ್ಲಾ ಭಾಷೆಯಲ್ಲಿರುವುದನ್ನು ನೋಡಬಹುದಾಗಿದೆ. ವಿಡಿಯೋದಲ್ಲಿರುವ ಸ್ಟೋರ್​ಗಳಲ್ಲಿಯೂ ಸಹ ಬಾಂಗ್ಲಾ ಭಾಷೆಯಲ್ಲೇ ಬರೆಯಲಾಗಿದೆ. ಇನ್ನು ಸಂತ್ರಸ್ತ ವ್ಯಕ್ತಿಯ ಮುಂದೆ ಹಿಡಿದಿರುವ ನ್ಯೂಸ್​ ಚಾನೆಲ್​ ಮೈಕ್​ನಲ್ಲೂ ಸಹ ಜಮುನಾ ಟಿವಿ ಎಂಬ ಲೋಗೋ ಇದೆ. ಇದು ಬಾಂಗ್ಲಾದೇಶದ ಮೂಲದ ನ್ಯೂಸ್​ ಚಾನೆಲ್​ ಆಗಿದೆ.

    ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

    ಸೂಕ್ತ ಕೀವರ್ಡ್ಸ್​ಗಳ ಸಹಾಯದಿಂದ ಗೂಗಲ್​ನಲ್ಲಿ ಹುಡುಕಾಡಿದಾಗ ಘಟನೆಗೆ ಸಂಬಂಧಿಸಿದ ಮಾಹಿತಿ ದೊರಕಿತು. ಈ ಘಟನೆ ಬಾಂಗ್ಲಾ ರಾಜಧಾಣಿ ಢಾಕಾದಲ್ಲಿ ನಡೆದಿದೆ. ವಿಡಿಯೋದಲ್ಲಿ ಅಳುತ್ತಿರುವ ವ್ಯಕ್ತಿಯನ್ನು ಫಜ್ಲುರ್​ ರಹಮಾನ್​ ಎಂದು ಗುರುತಿಸಲಾಗಿದ್ದು, ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್​ ಅಧಿಕಾರಿಗಳು ಒಕ್ಕಲೆಬ್ಬಿಸುವ ಸಮಯದಲ್ಲಿ ರಿಕ್ಷಾವನ್ನು ವಶಕ್ಕೆ ಪಡೆದಿದ್ದರು.

    ವರದಿಯ ಪ್ರಕಾರ ಕರೊನಾ ಹಿನ್ನೆಲೆಯಲ್ಲಿ ತನ್ನ ಹಿಂದಿನ ಕೆಲಸವನ್ನು ಕಳೆದುಕೊಂಡಿದ್ದ ಫಜ್ಲುರ್, ಲೋನ್​ ಮೂಲಕ ಸುಮಾರು 80 ಸಾವಿರ ರೂ. ಮೌಲ್ಯದ ಬ್ಯಾಟರಿ ಪವರ್​ವುಳ್ಳು ರಿಕ್ಷಾ ಕೊಂಡಿದ್ದರು. ಆದರೆ, ಅಕ್ಟೋಬರ್​ 5ರಂದು ಬ್ಯಾಟರಿ ಪವರ್​ವುಳ್ಳು ರಿಕ್ಷಾವನ್ನು ಹೊರಹಾಕುವ ಕಾರ್ಯಾಚರಣೆಗೆ ಇಳಿದ ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್​ ಅಧಿಕಾರಿಗಳು ಫಜ್ಲುರ್​ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದರು.

    ಢಾಕಾ ಟ್ರಿಬ್ಯೂನ್​ ಸಹ ವರದಿ ಮಾಡಿದ್ದು, ಮನಕಲಕುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬಾಂಗ್ಲಾ ಮೂಲದ ಶ್ವಪ್ನೋ ಹೆಸರಿನ ಗ್ರಾಸರಿ ಡೆಲಿವರಿ ಸರ್ವೀಸ್​ ಕಂಪನಿ ಮುಂದೆ ಬಂದು ಎರಡು ರಿಕ್ಷಾ ತೆಗೆದುಕೊಡುವುದಾಗಿ ಭರವಸೆ ನೀಡಿತು. ಅದರಂತೆ ಸಹಾಯವನ್ನೂ ಮಾಡಿತು. ಇದೇ ವರದಿಯನ್ನು ಅನೇಕ ವೆಬ್​ಸೈಟ್​ಗಳು ಸಹ ಪ್ರಕಟಿಸಿವೆ.

    ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

    ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ರಿಕ್ಷಾ ಸವಾರ ಅಳುತ್ತಿರುವ ವಿಡಿಯೋಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ಅದು ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಅಪಪ್ರಚಾರಕ್ಕಾಗಿ ವಿಡಿಯೋ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts