More

    FACT CHECK| ನೀಲಿ ಕಣ್ಣುಳ್ಳ ಈ ಹುಡುಗನಿಗೆ ಮುಸ್ಲಿಂ ವಲಸಿಗರು ಥಳಿಸಿದರೇ?; ಏನಿದರ ಅಸಲೀಯತ್ತು?

    ತೀವ್ರ ಗಾಯಗೊಂಡ, ಕಣ್ಣಿನ ಕೆಳಗೆ ಹೊಲಿಗೆ ಹಾಕಿಸಿಕೊಂಡ ಈ ಫೊಟೋ ನೋಡಿದೊಡನೆ ಮನ ಕಲುಕುತ್ತದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    “ಸ್ವೀಡಿಷ್​ನ 12 ವರ್ಷದ ಈ ಹುಡುಗ ಮುಸ್ಲಿಂ ವಲಸಿಗರಿಂದ ಥಳಿತಕ್ಕೊಳಗಾಗಿದ್ದಾನೆ. ಅದಕ್ಕೆ ಬಾಲಕನಿಗೆ ನೀಲಿ ಕಣ್ಣು ಇದ್ದದ್ದೇ ಕಾರಣ’ ಎಂದು ಹೇಳಲಾಗಿದೆ. ಆದರೆ ಇಂಡಿಯಾ ಟುಡೇ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಇದರ ಬಣ್ಣ ಬಯಲಾಗಿದೆ.

    ವೆಬ್​ಸೈಟ್​ವೊಂದರಲ್ಲಿ ಈ ಫೊಟೋ ಜತೆಗೆ ಸ್ವೀಡಿಷ್​ ಬಾಲಕ ನೀಲಿ ಕಣ್ಣು ಹೊಂದಿದ್ದಕ್ಕಾಗಿ ಮುಸ್ಲಿಂ ವಲಸಿಗರಿಂದ ಥಳಿಸಲ್ಪಟ್ಟ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟವಾಗಿತ್ತು.

    ಸ್ವೀಡಿಷ್​ ನಗರದ ಹೆಲ್ಸಿಂಗ್​ಬರ್ಗ್​ ಎಂಬಲ್ಲಿ ನಡೆದಿತ್ತು ಎಂದು ಸುದ್ದಿಯಲ್ಲಿ ಪ್ರಕಟವಾಗಿತ್ತು. ಆದರೆ, ಕಾನೂನಿನ ಭಯದಿಂದ ಇದು ಅಪರಾಧ ಅಥವಾ ದ್ವೇಷದ ಸುದ್ದಿ ಎಂದು ಬಿಂಬಿತವಾಗಿರಲಿಲ್ಲ.

    ಡೇವಿಡ್​ ವಾನ್ಸ್​ ಎಂಬ ಟ್ವೀಟರ್​ ಬಳಕೆದಾರ, ನೀಲಿ ಕಣ್ಣಿರುವುದೇ ತಪ್ಪೇನು? ಎಂಬ ಸಾಲಿನಡಿ ಈ ಫೊಟೋ ಹಾಕಿದ್ದರು. ಇದು 8,400 ಲೈಕ್​ ಪಡೆದು 7 ಸಾವಿರ ಬಾರಿ ರಿಟ್ವೀಟ್​ ಆಗಿತ್ತು. ಇನ್ನು ಕೆಲವರು ಈ ಪೋಸ್ಟ್​ನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು.

    ಟ್ವೀಟ್​ ಬಳಕೆದಾರನೊಬ್ಬ ಈ ಪೋಸ್ಟ್​ ಬಗ್ಗೆ ಕಮೆಂಟ್​ ಮಾಡಿ ಇದು ಸುಳ್ಳು ಸುದ್ದಿ ಎಂದಿದ್ದ. ಇದಕ್ಕೆ ವಾನ್ಸ್​, ಬಾಲಕನ ಬಗ್ಗೆ ಕಾಳಜಿಯಿಂದ ಈ ಪೊಸ್ಟ್​ ಹಾಕಿದ್ದೇನೆ ಆದರೆ, ಈ ಫೊಟೋ ಸುದ್ದಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದ.

    ಸತ್ಯ ಸಂಗತಿ ಏನು?

    ಈ ವೈರಲ್​ ಆದ ಫೊಟೋನ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಬಿಬಿಸಿ ಪ್ರಕಾರ ಈ ಫೊಟೋದಲ್ಲಿರುವ ಬಾಲಕಿಯ ಹೆಸರು ಸೋಫಿ ವಿಲ್ಲೀಸ್​. ಕಾರ್ಡಿಫ್​ನ ನಿವಾಸಿ ಈಕೆಗೆ ನಾಲ್ಕು ವರ್ಷ. 2008ರ ಏಪ್ರಿಲ್​ನಲ್ಲಿ ಈಕೆಯ ಮೇಲೆ ಕೈಜರ್​ ಎಂಬ ನಾಯಿ ದಾಳಿ ಮಾಡಿತ್ತು.

    ಈ ಸುದ್ದಿ ಆಗ ಡೈಲಿ ಮೇಲ್​ನಲ್ಲಿ ಕೂಡ ವರದಿಯಾಗಿತ್ತು. ಗಾಯಗೊಂಡ ಬಾಲಕಿಯ ಫೊಟೋಕ್ಕೂ ಹಾಗೂ ವಲಸಿಗ ಮುಸ್ಲಿಂರ ಥಳಿತ ಎಂಬ ಸುದ್ದಿಗೂ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts