More

    100 ವರ್ಷಗಳ ಹಿಂದೆ ಮೃತಪಟ್ಟ ಸನ್ಯಾಸಿ ಇಂದಿಗೂ ಹಸನ್ಮುಖಿ?: ವೈರಲ್​ ಸುದ್ದಿಯ ಸತ್ಯಾಂಶ ಬಯಲು!

    ನವದೆಹಲಿ: ಸತ್ತ ವ್ಯಕ್ತಿಯೊಬ್ಬ ನಗುವುದಕ್ಕೆ ಸಾಧ್ಯವೇ? ಅದರಲ್ಲೂ 100 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಮೃತದೇಹದ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಮೃತ ವ್ಯಕ್ತಿ ಇಂದಿಗೂ ನಗುತ್ತಿದ್ದಾರೆಂದರೆ ಯಾರಾದರೂ ನಂಬುತ್ತಾರೆಯೇ? ನೋವೇ ಚಾನ್ಸೇ ಇಲ್ಲ.

    ಆದರೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್​ ಆಗುತ್ತಿದ್ದು, 100 ವರ್ಷಗಳ ಹಿಂದೆ ಸಮಾಧಿ ಮಾಡಲಾದ ಸನ್ಯಾಸಿಯೊಬ್ಬರ ಮೃತದೇಹವು ಇಂದಿಗೂ ನಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ಸುದ್ದಿ ವಿಶ್ವದಾದ್ಯಂತ ಹಲವು ವೆಬ್​ಸೈಟ್​ಗಳಲ್ಲಿ ಪ್ರಕಟವಾಗಿದೆ. ಕೆಲ ಬೌದ್ಧ ಧರ್ಮಪಾಲಕರ ಪ್ರಕಾರ ಮೃತ ಸನ್ಯಾಸಿಯು ಇಂದಿಗೂ ಜೀವಂತವಾಗಿದ್ದು, ಆಳವಾದ ಧ್ಯಾನದಲ್ಲಿದ್ದಾರಂತೆ. ಸನ್ಯಾಸಿಯ ಮೃತದೇಹ ಮಂಗೋಲಿಯಾದ ಉಲಾಂಬತಾರ್​ ನಗರದ ಹೊರ ವಲಯದಲ್ಲಿ ಪತ್ತೆಯಾಗಿದೆ ಎಂದು ಟ್ವಿಟರ್​ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

    100 ವರ್ಷಗಳ ಹಿಂದೆ ಮೃತಪಟ್ಟ ಸನ್ಯಾಸಿ ಇಂದಿಗೂ ಹಸನ್ಮುಖಿ?: ವೈರಲ್​ ಸುದ್ದಿಯ ಸತ್ಯಾಂಶ ಬಯಲು!

    ವೈರಲ್​ ಸುದ್ದಿಯ ಸತ್ಯಾಂಶವನ್ನು ಹುಡುಕಿ ಹೊರಟ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ತಂಡ ಅಸಲಿಯತ್ತನ್ನು ಹೊರಹಾಕಿದ್ದು, ಸುಳ್ಳು ಸುದ್ದಿ ಎಂಬುದನ್ನು ಬಯಲು ಮಾಡಿದೆ. ಅಂದಹಾಗೆ ಫೋಟೋದಲ್ಲಿರುವ ಸನ್ಯಾಸಿಯ ಹೆಸರು ಲೌಂಗ್​ ಫೋರ್​ ಪೈನ್​. ಇವರು 2017ರ ನವೆಂಬರ್​ನಲ್ಲಿ ಬ್ಯಾಂಕಾಕ್​ನಲ್ಲಿ ಮೃತರಾದರೆಂದು ತಿಳಿದುಬಂದಿದೆ.

    ವೈರಲ್​ ಚಿತ್ರವನ್ನು ಗೂಗಲ್​ ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಾಡಿದಾಗ 2017ರಲ್ಲಿ ಅನಾರೋಗ್ಯದಿಂದ ಥಾಯ್ಲೆಂಡ್​ನ ಬ್ಯಾಂಕಾಕ್​ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಿಸದೇ ಸನ್ಯಾಸಿ ಮೃತಪಟ್ಟರು ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಸಿದಂತೆ 2018ರಲ್ಲಿ ಅನೇಕ ಮಾಧ್ಯಮಗಳು ಸಹ ಇದೇ ಚಿತ್ರವನ್ನು ಬಳಸಿ ಸುದ್ದಿಯನ್ನು ಪ್ರಕಟಿಸಿವೆ. ಡೈಲಿ ಮೇಲ್​ ವೆಬ್​ಸೈಟ್ ಮಾಡಿರುವ ಪ್ರಕಾರ ಸನ್ಯಾಸಿ ಲೌಂಗ್​ ಫೋರ್​ ಪೈನ್​ ಅವರು 92ನೇ ವಯಸ್ಸಿನಲ್ಲಿ 2017, ನವೆಂಬರ್​ 16ರಂದು ಬ್ಯಾಂಕಾಕ್​ ಆಸ್ಪತ್ರೆಯಲ್ಲಿ ಮೃತರಾದರು ಎಂದು ವರದಿ ಮಾಡಿದೆ.

    ಮರಣ ಹೊಂದಿದ ಎರಡು ತಿಂಗಳ ಬಳಿಕ ಮೃತದೇಹವನ್ನು ಕೆಫಿನ್​ನಿಂದ ಅವರ ಅನುಯಾಯಿಗಳು ಹೊರತೆಗೆದಂತಹ ಸಂದರ್ಭದಲ್ಲಿ ವೈರಲ್​ ಆಗಿರುವ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಬೌದ್ಧ ಧರ್ಮದ ಅಂತ್ಯಕ್ರಿಯೆ ಪ್ರಕಾರ ಹೊಸ ಕೆಫಿನ್​ನಲ್ಲಿ ಇಡಲು ಹೊರ ತೆಗೆಯಲಾಗಿತ್ತು. ಇನ್ನು ಮೃತ ಸನ್ಯಾಸಿ ಕಾಂಬೋಡಿಯಾ ಮೂಲದವರು. ಆದರೆ, ತಮ್ಮ ಜೀವಿತಾವಧಿಯ ಹೆಚ್ಚು ಕಾಲವನ್ನು ಅವರು ಥಾಯ್ಲೆಂಡ್​ನ ಕೇಂದ್ರ ಪ್ರಾಂತ್ಯ ಲೋಪ್​ಬರಿಯಲ್ಲೇ ಕಳೆದರು. ಹೀಗಾಗಿ ಸದ್ಯ ವೈರಲ್​ ಆಗಿರುವ ಫೋಟೋ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಬಯಲಾಗಿದೆ. (ಏಜೆನ್ಸೀಸ್​)

    2014, ಜುಲೈ 7ರಂದು ಸಂಜನಾ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​: ಗಲ್ರಾನಿ ಗುಟ್ಟು ರಟ್ಟು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts