More

    ಸೌಲಭ್ಯ ಸದುಪಯೋಗ ಪಡೆಯಬೇಕು

    ಚನ್ನಮ್ಮನ ಕಿತ್ತೂರು: ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

    ಇಲ್ಲಿನ ರಾಜಗುರು ಗುರುಸಿದ್ಧ ಸ್ವಾಮೀಜಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರೀಕ್ಷೆ-2024 ತಯಾರಿ ತರಬೇತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತಿರುವ ಪ್ರಾಚಾರ್ಯರ ಕಾರ್ಯ ಶ್ಲಾಘನೀಯ ಎಂದರು.

    ಬೆಂಗಳೂರಿನ ವಾಣಿ ವಿಲಾಸ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪ್ರಸನ್ನಕುಮಾರ ಮಾತನಾಡಿ, ವಿದ್ಯಾರ್ಥಿಗಳು ಬಹುದೊಡ್ಡ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸ್ನೇಹಿಯಾಗಿದೆ ಎಂದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಿರಿಯ ಸಹಾಯಕ ನಿರ್ದೇಶಕ ವಿ.ಎಸ್.ವಿಜಯಕುಮಾರ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಯೋಜನಾ ಬದ್ಧವಾಗಿರಬೇಕು. ವಿಷಯಗಳನ್ನು ಸಮಗ್ರವಾಗಿ ಓದಿದರೆ ಮಾತ್ರ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದರು.

    ಅಮೆರಿಕದ ರಮಣಿ ಶಣೈ ೌಂಡೇಷನ್ ಕಳೆದ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಿದ ಧನಸಹಾಯ ಚೆಕ್‌ನ್ನು ಕಲಾ ವಿಭಾಗದ ಸಾವಿತ್ರಿ ಇಂಚಲ, ವಿಜ್ಞಾನ ವಿಭಾಗದ ಜ್ಯೋತಿ ಕೋಟಗಿ ಹಾಗೂ ವಾಣಿಜ್ಯ ವಿಭಾಗದ ಕಾರ್ತಿಕ ಹಡಪದ ಅವರಿಗೆ ವಿತರಿಸಲಾಯಿತು. ಪ್ರಾಚಾರ್ಯ ಜಿ.ಎಂ. ಗಣಾಚಾರಿ, ಸಾವಿತ್ರಿ ಗಜಪತಿ, ಉಪನ್ಯಾಸಕರಾದ ವಾಸುದೇವ ಧಾರವಾಡ, ಸುನೀತಾ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts