More

    ಉಡುಗೊರೆ ಆಸೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ವಕೀಲೆ

    ಬೆಂಗಳೂರು: ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಯುವತಿ, ದುಬಾರಿ ಬೆಲೆಯ ಉಡುಗೊರೆ ಕಳುಹಿಸುವ ಆಮಿಷವೊಡ್ಡಿ ವಕೀಲೆಯಿಂದ 5.2 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ಮಲ್ಲೇಶ್ವರ ನಿವಾಸಿ ವಂಚನೆಗೊಳಗಾದ ವಕೀಲೆ. ವಂಚಕರಾದ ನ್ಯಾನ್ಸಿ ಮತ್ತು ಎಡ್ವಿನ್ ಆಂಡ್ರ್ಯೂ ಎಂಬುವರ ವಿರುದ್ಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಸಂತ್ರಸ್ತೆ ಜತೆ ಕೆಲ ತಿಂಗಳ ಹಿಂದೆ ಎಡ್ವಿನ್ ಆಂಡ್ರ್ಯೂ ಎಂಬ ಯುವತಿ ಸ್ನೇಹ ಬೆಳೆಸಿದ್ದಳು. ಆಕೆ ನಿತ್ಯ ಚಾಟಿಂಗ್ ಮಾಡುತ್ತಿದ್ದಳು. ಆಕೆಯನ್ನು ನಂಬಿ ತನ್ನ ಪುತ್ರಿಯ ಹುಟ್ಟುಹಬ್ಬ ಇರುವ ವಿಚಾರವನ್ನು ಹೇಳಿಕೊಂಡಿದ್ದರು. ಆಗ, ಎಡ್ವಿನ್ ತಾನು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಳು. ಜೂ. 8ರಂದು ಕರೆ ಮಾಡಿದ್ದ ಮತ್ತೋರ್ವ ಯುವತಿ, ತಾನು ದೆಹಲಿ ಕಸ್ಟಮ್ಸ್ ಕಚೇರಿಯ ಸಿಬ್ಬಂದಿ ನ್ಯಾನ್ಸಿ ಎಂದು ಪರಿಚಯಿಸಿಕೊಂಡಿದ್ದಳು. ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ. ಅದನ್ನು ಬಿಡಿಸಿಕೊಳ್ಳಿ ಎಂದು ಹೇಳಿದ್ದಳು. ಉಡುಗೊರೆ ವಿಚಾರವನ್ನು ಖಚಿತಪಡಿಸಿಕೊಳ್ಳಲು ಎಡ್ವಿನ್​ಗೆ ವಕೀಲೆ ಕರೆ ಮಾಡಿದಾಗ ತಾನೇ ಉಡುಗೊರೆ ಕಳುಹಿಸಿದ್ದು ಎಂದು ಹೇಳಿದ್ದಳು. ದುಬಾರಿ ಗಿಫ್ಟ್ ಆದಾಗಿದ್ದು, ಪಾರ್ಸೆಲ್ ಶುಲ್ಕ ಪಾವತಿಸಿ ಬಿಡಿಸಿಕೊಳ್ಳುವಂತೆ ಸೂಚಿಸಿದ್ದಳು.

    ಇದನ್ನೂ ಓದಿ: ನಾಳೆಗೂ ಇಂದೇ ದಂಡ ವಸೂಲಿ ಮಾಡುತ್ತಿರುವ ಕೊಪ್ಪ ಎಸ್​ಐ ಅಯ್ಯನಗೌಡ

    ಕೆಲ ನಿಮಿಷಗಳ ಬಳಿಕ ಮತ್ತೆ ಕರೆ ಮಾಡಿದ್ದ ನ್ಯಾನ್ಸಿ, ಪಾರ್ಸೆಲ್ ಶುಲ್ಕಕ್ಕೆಂದು ಹೇಳಿ 5.2 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾಳೆ. ಆದರೆ, ಗಿಫ್ಟ್ ಕಳುಹಿಸಿಲ್ಲ. ಈ ಕುರಿತು ವಿಚಾರಿಸಲು ಎಡ್ವಿನ್ ಮತ್ತು ನ್ಯಾನ್ಸಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಗಿಫ್ಟ್ ಹೆಸರಿನಲ್ಲಿ ವಂಚಿಸಿರುವುದು ಗೊತ್ತಾಗಿ ವಕೀಲೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಐಒಸಿಎಲ್ ಸಹಾಯವಾಣಿ ಹೆಸರಿನಲ್ಲಿ 6.75 ಲಕ್ಷ ರೂಪಾಯಿ ದೋಚಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts