More

    ಪೌರಕಾರ್ವಿುಕರು ಕಾಯಕ ಯೋಗಿಗಳು

    ಹುಬ್ಬಳ್ಳಿ: ಚಳಿ, ಮಳೆ, ಗಾಳಿ, ಬಿಸಿಲು, ಕೊಳಚೆ, ದುರ್ವಾಸನೆ ಸಹಿಸಿಕೊಂಡು ಕೆಲಸ ನಿರ್ವಹಿಸುವ ಪೌರ ಕಾರ್ವಿುಕರ ಸೇವೆ ದೊಡ್ಡದು. ನಗರವನ್ನು ನಿತ್ಯವೂ ಸ್ವಚ್ಛ ಮಾಡುವ ಪೌರಕಾರ್ವಿುಕರು ನೈಜ ಕಾಯಕ ಯೋಗಿಗಳು. ಅವರು ಪಡುವ ಶ್ರಮಕ್ಕಾದರೂ ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮೇಯರ್ ವೀಣಾ ಬಾರದ್ವಾಡ ಹೇಳಿದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ದೃಷ್ಟಿದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿ ಗುರುವಾರ ಪೌರಕಾರ್ವಿುಕರಿಗಾಗಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಪೌರ ಕಾರ್ವಿುಕರ ಹಿತ ಕಾಪಾಡುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಮಹಿಳಾ ಕಾರ್ವಿುಕರು ನಿತ್ಯ ಕಾಯಕದ ಜತೆಗೆ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಕೊಳ್ಳಬೇಕು. ನೀವು ಆರೋಗ್ಯವಾಗಿದ್ದರೆ ನಗರ ಸ್ವಚ್ಛವಾಗಿರಲು ಸಾಧ್ಯ ಎಂದು ಹೇಳಿದರು.

    ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವಲ್ಲಿ ಮುಖ್ಯಪಾತ್ರ ವಹಿಸುವ ಪೌರಕಾರ್ವಿುಕರು ತಮ್ಮ ಕಣ್ಣಿನ ರಕ್ಷಣೆಗೆ ಒತ್ತು ನೀಡುವುದು ಅವಶ್ಯ ಎಂದು ಹೇಳಿದರು.

    ಐಎಂಎ ಅಧ್ಯಕ್ಷ ಡಾ. ಸುಭಾಶ ಬಬ್ರುವಾಡ ಅಧ್ಯಕ್ಷತೆ ವಹಿಸಿದ್ದರು. ನೇತ್ರ ತಜ್ಙ ಡಾ. ಕೃಷ್ಣ ಪ್ರಸಾದ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಇಂಜಿನಿಯರ್ ಬಿ. ಎಂ. ಮಲ್ಲಿಕಾರ್ಜುನ್, ನಯನಾ, ಸಿದ್ದು ಮೊಗಲಿಶೆಟ್ಟರ, ಇತರರು ಇದ್ದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಪೌರ ಕಾರ್ವಿುಕರು ನೇತ್ರ ತಪಾಸಣೆ ಮಾಡಿಸಿಕೊಂಡರು. 60ಕ್ಕೂ ಹೆಚ್ಚು ಪೌರ ಕಾರ್ವಿುಕರನ್ನು ಕಣ್ಣಿನ ಪೊರೆ ಶಸ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅವಶ್ಯಕತೆ ಇದ್ದವರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts