More

    ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯರಾಗಿ

    ಗಂಗಾವತಿ: ಕ್ರೀಯಾಶೀಲ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಅರೋಗ್ಯವಂತರನ್ನಾಗಿ ಮಾಡುತ್ತಿದ್ದು, ಪಠ್ಯ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗುವಂತೆ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜಾಜಿ ದೇವೇಂದ್ರಪ್ಪ ಸಲಹೆ ನೀಡಿದರು.

    ಇದನ್ನೂ ಓದಿ: ಪಠ್ಯೇತರ ಶಿಕ್ಷಣಕ್ಕೂ ಆದ್ಯತೆ ಕೊಡಿ

    ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಳ್ಳಾರಿ ವಿವಿ ಅಂತವಲಯ ಕಾಲೇಜುಗಳ ಪುರುಷರ ಹ್ಯಾಂಡ್ ಬಾಲ್ ಪಂದ್ಯಾಟ ಮತ್ತು ವಿವಿ ತಂಡ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸದಡ ದೇಹ ಮತ್ತು ಮನಸ್ಸು ಗಳಿಂದ ಅಭಿವೃದ್ಧಿ ದೇಶ ಕಟ್ಟಲು ಸಾಧ್ಯ. ಕ್ರೀಡಾ ಚಟುವಟಿಕೆಗಳು ಮನುಷ್ಯನ ಅವಿಭಾಜ್ಯ ಅಂಗವಾಗಬೇಕಿದ್ದು, ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

    ವಿವಿ ವ್ಯಾಪ್ತಿಯ 9 ತಂಡಗಳು ಭಾಗವಹಿಸಿದ್ದವು. ಬಳ್ಳಾರಿ ವಿವಿ ತಂಡ (ವಿನ್ನರ್), ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ತಂಡ (ರನ್ನರ್) ಪ್ರಶಸ್ತಿ ಪಡೆದುಕೊಂಡವು.

    ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅನಿಲ್ ಕುಮಾರ್ ಎಡ್ವರ್ಡ್, ಪ್ರಾಧ್ಯಾಪಕರಾದ ಪ್ರೊ.ಜಗದೇವಿ ಎಂ.ಕಲಶೆಟ್ಟಿ, ಡಾ.ವೈ.ಎಸ್.ವಗ್ಗಿ, ಸುಹಾಸ್, ನಜೀರ್, ಹುಲಿರಾಜ್, ಡಾ.ಶಿವಕುಮಾರ್, ಕರಿಗೂಳಿ ಸುಂಕೇಶ್ವರ, ಡಾ.ಸೆಲ್ವರಾಜ್, ಅಕ್ಕಿ ಮಾರುತಿ, ರವಿಕುಮಾರ, ಮೆಹೆತಾಬ ಅಂಜುಮ್, ಅನಿತಾ, ಡಾ.ಮುಮ್ತಾಜ್ ಬೇಗಂ, ಡಾ.ಇಟಗಿ ಶಿಬಾರಾಣಿ, ಆಶ್ರಪ್ಪ ಅಳ್ಳಳ್ಳಿ, ಡಾ.ರವಿಕಿರಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts