More

    ಸಾಹಿತಿ ಭಗವಾನ್‌ರನ್ನು ಗಡಿಪಾರು ಮಾಡಿ

    ಆಲ್ದೂರು: ಮೈಸೂರಿನಲ್ಲಿ ಸಾಹಿತಿ ಭಗವಾನ್ ಅವರು ಒಕ್ಕಲಿಗ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಒಕ್ಕಲಿಗ ಸಮಾಜದಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
    ಆಲ್ದೂರು ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಡಿ.ಬಿ.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮಾಜ ಹತ್ತಾರು ಮುಖ್ಯಂತ್ರಿಗಳನ್ನು ನೀಡಿದೆ. ಹೆಸರಾಂತ ಸಾಹಿತಿಗಳಾದ ಕುವೆಂಪು, ಜವರೇಗೌಡ ನಮ್ಮ ಸಮಾಜದವರಾಗಿದ್ದು, ಅನೇಕ ಕೊಡುಗೆಗಳನ್ನು ಕೊಟ್ಟಿರುವ ಈ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಭಗವಾನ್ ಸಾಹಿತಿ ಅಲ್ಲ.ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
    ತಾಪಂ ಮಾಜಿ ಸದಸ್ಯ ಜಿ.ಯು.ರಘು ಮಾತನಾಡಿ, ಭಗವಾನ್‌ಗೆ ಬುದ್ದಿ ಭ್ರಮಣೆಯಾಗಿದೆ ಅವರ ಮಾತಿನಲ್ಲಿ ಹಿಡಿತವಿಲ್ಲ . ಇವರಿಗೆ ಪೊಲೀಸ್ ಇಲಾಖೆಯಿಂದ ಭದ್ರತೆ ಕೊಡಬಾರದು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರಿಗೆ ಜನರು ಬುದ್ದಿ ಕಲಿಸ ಬೇಕು. ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ ಅವರು ನೆಡೆಸುವ ಕಾರ್ಯಕ್ರಮಕ್ಕೆ ಘೇರಾವ್ ಹಾಕಬೇಕು. ಮಾನಸಿಕವಾಗಿ ಅಸ್ವಸ್ಥರಾಗಿರುವ ಭಗವಾನ್‌ರನ್ನು ಆಸ್ಪತ್ರೆಗೆ ಸೇರಿಸಬೇಕು. ಅವರ ಚಿಕಿತ್ಸೆ ವೆಚ್ಚವನ್ನು ನಮ್ಮ ಸಮಾಜವೇ ಭರಿಸುತ್ತದೆ ಎಂದು ವ್ಯಂಗ್ಯವಾಡಿದರು.
    ಚಿಕ್ಕಮಗಳೂರು ಟಿಎಪಿಎಂಎಸ್ ನಿರ್ದೇಶಕ ಎಚ್.ಎಸ್ ಕವೀಶ್ ಮಾತನಾಡಿ, ನಮ್ಮ ಸಮಾಜದ ಆದಿಚುಂಚನಗಿರಿ ಮಠ ಸಾವಿರಾರು ವಿಧ್ಯಾರ್ಥಿಗಳಿಗೆ ಉಚಿತ ವಿಧ್ಯಾಭ್ಯಾಸ ನೀಡುತ್ತಿದೆ. ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಿರುವುದನ್ನು ಖಂಡಿಸುತ್ತಿದೆ ಎಂದರು.
    ತಾಪಂ ಮಾಜಿ ಸದಸ್ಯ ಎಚ್.ಎಸ್.ಕೃಷ್ಣೇಗೌಡ, ಭವ್ಯ ನಟೇಶ್, ಮಹೇಶ್, ಒಕ್ಕಲಿಗ ಸಮಾಜದ ಉಪಾಧ್ಯಕ್ಷ ಸಂಪತ್,ಕಾರ್ಯದರ್ಶಿ ವಸಂತ್, ಖಜಾಂಚಿ ಲಕ್ಷ್ಮಣ್‌ಗೌಡ, ಒಕ್ಕಗ ಸಂಘದ ನಿರ್ದೇಶಕ ರುದ್ರೇಗೌಡ, ದಿನೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್,ಗ್ರಾಪಂ ಸದಸ್ಯರಾದ ಪ್ರದೀಪ್, ಅರವಿಂದ್, ನೀತಿನ್, ಕೌಶಿಕ್,ದಿನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts