More

    ರೋಮಾಂಚನಗೊಳಿಸಿದ ಟಗರಿನ ಕಾಳಗ

    ಲಕ್ಷ್ಮೇಶ್ವರ: ಪಟ್ಟಣದ ದುಂಡಿ ಬಸವೇಶ್ವರ ರಸ್ತೆಯ ಜಮೀನೊಂದರಲ್ಲಿ ಕರವೇ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಟಗರಿನ ಕಾಳಗ ಪ್ರೇಕ್ಷಕರ ಮೈಮನ ರೋಮಾಂಚನಗೊಳಿಸಿತು.

    ಹಾಲು ಹಲ್ಲು, 2, 4, 6, 8 ಹಲ್ಲುಗಳು ಮತ್ತು ಮುಕ್ತ ಹೀಗೆ 5 ವಿಭಾಗದಲ್ಲಿ ಏರ್ಪಡಿಸಿದ್ದ ಟಗರಿನ ಕಾಳಗಕ್ಕೆ ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಹರಿಹರ, ಧಾರವಾಡ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ರಾಣೆಬೆನ್ನೂರ ಮೊದಲಾದ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಟಗರುಗಳು ಪಾಲ್ಗೊಂಡಿದ್ದವು. ಟಗರಿನ ಕಾಳಗ ವೀಕ್ಷಿಸಲು ವಿವಿಧೆಡೆಯಿಂದ ಜನರು ಆಗಮಿಸಿದ್ದರು.

    ಟಗರಿನ ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳೊಂದಿಗೆ ಟಗರಿನ ಕಾಳಗ ಏರ್ಪಡಿಸಿದ್ದು, ಸೋಮವಾರವೂ ಮುಂದುವರಿಯಲಿದೆ ಎಂದರು.

    ಕರವೇ ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಆಸ್ಪಾಕ್ ಬಾಗೋಡಿ, ಅಪ್ಪು ಉಮಚಗಿ, ಶಂಕರ ಪಾಟೀಲ, ರಾಮು ನಾಯಕ, ಪ್ರವೀಣ ಬೇಪಾರಿ, ಕೈಸರ್ ಮುಲ್ಲಾ, ಪ್ರಕಾಶ ಉದ್ದನಗೌಡ್ರ, ಪ್ರವೀಣ ಗಾಣಿಗೇರ, ಕಾರ್ತಿಕ ಗುಡಗೇರಿ, ಸುಲೇಮಾನ ಬೂದಿಹಾಳ, ದುದ್ದುಸಾಬ್ ಅಕ್ಕಿ,ಮೈನು ಮನಿಯಾರ, ದ್ಯಾಮಣ್ಣ ಬಾಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts