More

    ವಲಯಮಟ್ಟದ ಕ್ರೀಡಾಕೂಟದಲ್ಲಿ ಆಕ್ಸಫರ್ಡ್ ಶಾಲೆ ವಿದ್ಯಾರ್ಥಿಗಳ ಅಮೋಘ ಸಾಧನೆ

    ವಿಜಯಪುರ : ನಗರದ ಹೊರವಲಯ ಸೊಲ್ಲಾಪುರ ರಸ್ತೆಯಲ್ಲಿರುವ ಬಿ.ಎಂ.ಪಾಟೀಲ ಕಾಲೇಜು ಕ್ಯಾಂಪಸ್‌ನಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಲಯಮಟ್ಟದ ಕ್ರೀಡಾಕೂಟದಲ್ಲಿ ಆಕ್ಸರ್ಡ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

    ಗುಂಪು ಆಟಗಳಾದ ಖೋಖೋ, ಕಬಡ್ಡಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

    ಪ್ರಾಥಮಿಕ ಶಾಲೆ ವಿಭಾಗದಲ್ಲಿ ರಿತಿಕಾ ದೇಸಾಯಿ, ಸಾಕ್ಷಿ ಕೊಲ್ಲೂರ, ಸಾಕ್ಷಿ ಅಡಕಿ, ಸಂಕಿತಾ ಹಜೇರಿ, ಆನಂದ ಘಂಟಿ, ಅಹಾನ ನಾಟೀಕಾರ ವೈಯಕ್ತಿಕ ಕ್ರೀಡಾಕೂಟದಲ್ಲಿ ಸಾಧನೆಗೈದಿದ್ದಾರೆ.

    ಪ್ರೌಢಶಾಲಾ ವಿಭಾಗದಲ್ಲಿ ವೈಷ್ಣ್ಣವಿ ಗೆಂದ, ನಂದಿನಿ ಹಾಲಳ್ಳಿ, ರವಿಕುಮಾರ ಬಿರಾದಾರ, ಸಾಗರ ಜಾಧವ, ಉಮೇಶ ನವಲಿ, ಅನುಷ್ಕಾ ಕೊನ್ನೂರ, ಆಕಾಶ ಬಿರಾದಾರ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಗುಂಪು ಆಟಗಳಾದ ವಾಲಿಬಾಲ್ ಮತ್ತು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕುಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಶೇಖರ ಕೌಲಗಿ ಮಾತನಾಡಿ, ಮಕ್ಕಳು ಕ್ರೀಡೆಯಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

    ಎಸ್.ಕೆ.ಬಿರಾದಾರ ಮಾತನಾಡಿ, ಕರೊನಾ ಸಂಕಷ್ಟದ ತದನಂತರ ಮತ್ತೆ ಮಕ್ಕಳಲ್ಲಿ ಕ್ರೀಡಾ ಚೈತನ್ಯ ತುಂಬಲು ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

    ಸಂಸ್ಥೆ ಚೇರ್ಮನ್ ಸಂಗಮೇಶ ಬಬಲೇಶ್ವರ, ಕಾರ್ಯದರ್ಶಿ ಬಸವರಾಜ ಕೌಲಗಿ, ಪ್ರಾಚಾರ್ಯ ಜೆ.ಎಂ. ಇನಾಂದಾರ, ಆಡಳಿತಾಧಿಕಾರಿ ಪ್ರದೀಪ ಲಿಂಗದಳ್ಳಿ ಹರ್ಷವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts