More

    ಚುನಾವಣಾ ಸಿಬ್ಬಂದಿ ಜತೆಗೆ ಪೆನ್​ ವಿಚಾರಕ್ಕೆ ವಾಗ್ವಾದಕ್ಕಿಳಿದ್ರು ಮಾಜಿ ಶಾಸಕ ಕಾಶಪ್ಪನವರ

    ಬಾಗಲಕೋಟೆ: ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನವನಗರದ ಎಸ್.ಬಿ.ಪಾಟೀಲ ಪದವಿಪೂರ್ವ ಕಾಲೇಜ್​ನಲ್ಲಿ ನಡೆಯತ್ತಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ನಡುವೆ, ಮತಚಲಾಯಿಸಲು ಆಗಮಿಸಿದ ಮಾಜಿ ಶಾಸಕ ಕಾಶಪ್ಪನವರ ಪೆನ್​ ವಿಚಾರಕ್ಕಾಗಿ ಚುನಾವಣಾ ಸಿಬ್ಬಂದಿ ಜತೆಗೆ ವಾಗ್ವಾದಕ್ಕಿಳಿದ ದೃಶ್ಯ ಗಮನಸೆಳೆಯಿತು. ಮತಗಟ್ಟೆಯ ಸಮೀಪ ಡೆಲಿಗೇಶನ್ ಫಾರ್ಮ್ ಪರಿಶೀಲಿಸುತ್ತಿದ್ದ ವೇಳೆ, ಚುನಾವಣಾ ನಿಯಮ ಪ್ರಕಾರ ಪೆನ್ ಮತಗಟ್ಟೆಯೊಳಗೆ ಕೊಂಡೊಯ್ಯುವಂತಿಲ್ಲ ಎಂದು ಚುನಾವಣಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾಶಪ್ಪನವರ, ವಾಗ್ವಾದಕ್ಕೇ ಇಳಿದರು.

    ಹೇ ಮಿಸ್ಟರ್ ಯಾರಿಗೆ ಮಾತಾಡ್ತಾ ಇದ್ದೀಯಾ…? ಪೆನ್ನು ಒಯ್ಯಬಾರದಾ ಎಂದು ಕಾಶಪ್ಪನವರ್ ಹಾಕಿದ್ದು, ಇದಕ್ಕೆ ಚುನಾವಣಾ ಅಧಿಕಾರಿ ಕೊಟ್ಟ ಮಾಹಿತಿ ನಿಮಗೆ ಹೇಳ್ತಾ ಇದ್ದೀನಿ ಎಂದು ಚುನಾವಣಾ ಸಿಬ್ಬಂದಿ ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಕೂಡಲೇ ಸ್ಥಳದಲ್ಲಿದ್ದ ಇತರರು ಕಾಶಪ್ಪನವರನ್ನು ಸಮಾಧಾನಿಸಿ ಮುಂದಿನ ಕೆಲಸ ನೋಡಿ ಸರ್ ಎಂದು ಕಳುಹಿಸಿದ್ರು. ನಂತರ, ಅಸಮಾಧಾನದಿಂದಲೇ ಕಾಶಪ್ಪನವರ್ ಮತಗಟ್ಟೆಗೆ ಮತ ಚಲಾಯಿಸುವುದಕ್ಕೆ ತೆರಳಿದ್ರು.

    ಇದನ್ನೂ ಓದಿ: ಅಮೆರಿಕ ಚುನಾವಣೆ: ಭಾರತ-ಅಮೆರಿಕ ಬಾಂಧವ್ಯ ಏನು-ಹೇಗೆ?

    ಮೂರು ಸಾವಿರ ಕೋಟಿ ರೂ. ಠೇವಣಿ ಹೊಂದಿರುವ ಪ್ರತಿಷ್ಠಿತ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗದ್ದುಗೆ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮಧ್ಯ ಪ್ರತಿಷ್ಠೆಯ ಕಾಳಗ ಏರ್ಪಟ್ಟಿದೆ. ಹಾಲಿ,ಮಾಜಿ ಶಾಸಕರು ಕಣದಲ್ಲಿದ್ದು, 13 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಶಾಸಕರಾದ ಆನಂದ ನ್ಯಾಮಗೌಡ, ಸಿದ್ದು ಸವದಿ, ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ, ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಜೆ ಏಳು ಗಂಟೆ ಸುಮಾರಿಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. (ದಿಗ್ವಿಜಯ ನ್ಯೂಸ್)

    ಯೋಗೇಶ್ ಗೌಡ ಕೊಲೆ ಕೇಸ್: ಕುಲಕರ್ಣಿ ಸಹೋದರರಿಗೆ ಸಿಬಿಐ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts