More

    ಜಿಲ್ಲಾದ್ಯಂತ 6 ರಿಂದ ಇವಿಎಂ,ವಿವಿ ಪ್ಯಾಟ್ ಜಾಗೃತಿ,ಡಿಸಿ

    ಜಿಲ್ಲಾದ್ಯಂತ 6 ರಿಂದ ಇವಿಎಂ,ವಿವಿ ಪ್ಯಾಟ್ ಜಾಗೃತಿ,ಡಿಸಿ

    ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ವಿ.ವಿ.ಪ್ಯಾಟ್ ಕಾರ‌್ಯವೈಖರಿ ಕುರಿತು ಫೆ.6ರಿಂದ ಮಾರ್ಚ್ 6ವರೆಗೆ ಜಿಲ್ಲಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ. ಜಿಲ್ಲೆ ಯ 1206 ಸ್ಥಳಗಳಲ್ಲಿ(ಇವಿಎಂ)ಗಳಲ್ಲಿ ಮತ ಚಲಾಯಿಸುವ ಬಗೆ ಹಾಗೂ ಮತ ಖಾತ್ರಿ ಕುರಿತಂತೆ ವಿವಿ ಪ್ಯಾಟ್‌ನ ಕಾರ‌್ಯವೈಖರಿ ಬಗ್ಗೆ ಜಾಗೃತಿ ಮೂಡಿಸಲಾಗುವುದು.

    ಒಂದು ತಿಂಗಳ ಒಳಗೆ ಪ್ರತಿ ಸ್ಥಳದಲ್ಲಿ ಎರಡು ಬಾರಿ ಪ್ರದರ್ಶನ ಏರ್ಪಡಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಏಕ ಕಾ ಲಕ್ಕೆ ಜಾಗೃತಿ ಕಾರ‌್ಯಕ್ರಮ ಆರಂಭ ವಾಗಲಿದೆ. ಇದಕ್ಕಾಗಿ 75 ವಾಹನಗಳನ್ನು ಬಳಸಲಾಗುತ್ತಿದೆ. 152 ಸೆಕ್ಟರ್ ಅಧಿಕಾರಿಗಳು ಹಾಗೂ 7 ಹೆಚ್ಚುವರಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

    ಮೊಳಕಾಲ್ಮೂರು ಕ್ಷೇತ್ರದ 207 ಸ್ಥಳಗಳಲ್ಲಿ ಕಲ್ಪಿತ ಪ್ರದರ್ಶನವಿದ್ದು,ಇದಕ್ಕಾಗಿ 14 ವಾಹನಗಳನ್ನು ನಿಯೋಜಿಸಲಾಗಿದೆ. ಚಳ್ಳಕೆರೆ-180-12. ಚಿತ್ರದುರ್ಗ-175-10. ಹಿರಿಯೂರು-203-14.ಹೊಸದುರ್ಗ-195-11ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ 246 ಸ್ಥಳಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲು 14 ವಾಹನಗಳನ್ನು ಬಳಸಲಾಗುತ್ತಿದೆ. ಈ ಒಂದು ತಿಂಗಳ ಅವಧಿಯಲ್ಲಿ ನಡೆಯುವ ಪ್ರಮುಖ ಜಾತ್ರೆ, ಸಂತೆಗಳಲ್ಲೂ ಜಾಗೃತಿ ಮೂಡಿಸಲಾಗುವುದು. ಮತದಾರರು ಜಾಗೃತಿ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts