More

    ಎಲ್ಲರೂ ಹಕ್ಕು ಚಲಾಯಿಸಿ ಹರಪನಹಳ್ಳಿ ರಾಜ್ಯಕ್ಕೆ ಮಾದರಿಯಾಗಿಸಿ

    ಹರಪನಹಳ್ಳಿ: ಮೇ 10ರ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಹರಪನಹಳ್ಳಿ ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರನಾಯ್ಕ ಎಲ್. ಹೇಳಿದರು.

    ಮೇಣದಬತ್ತಿ ಬೆಳಗಿ ಮತದಾನ ಜಾಗೃತಿ

    ತಾಲೂಕಿನ ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಯ ದೇವರ ತಿಮ್ಮಲಾಪುರದ ಶ್ರೀ ವೆಂಕಟೇಶ್ವರ ದೇವಸ್ಥಾನ ಮುಂಭಾಗ ತಾ ಪಂ,ಗ್ರಾಪಂ ವತಿಯಿಂದ ಸ್ವೀಪ್ ಅಭಿಯಾನದಡಿ ಆಯೋಜಿಸಿದ್ದ ಮೇಣದಬತ್ತಿ ಬೆಳಗಿ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮತದಾನ ಪ್ರಮಾಣ ಹೆಚ್ಚಿಸಲು ವಿಭಿನ್ನ ಪ್ರಯತ್ನ

    ಈಗಾಗಲೇ ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ಸಾಕಷ್ಟು ಸ್ವೀಪ್ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇದೀಗ ತಾಂಡಾಗಳಲ್ಲೂ ಸ್ವೀಪ್ ಚಟುವಟಿಕೆ ಕೈಗೊಳ್ಳಲು ಸಂಬಂಧಿಸಿದ ಸಿಬ್ಬಂದಿಗೆ ತಿಳಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಎಲ್ಲರೂ ಮತದಾನ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮದಿಂದ ಹಕ್ಕು ಚಲಾಯಿಸಬೇಕು ಎಂದರು.

    ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿ, ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದರು.

    ಇದನ್ನೂ ಓದಿ: ಸಂವಿಧಾನ ನೀಡಿರುವ ಹಕ್ಕು ಚಲಾಯಿಸಿ

    ಪಿಡಿಒ ರಮೇಶ, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಹಾಯಕ ಅಭಿಯಂತರರಾದ ಮಲ್ಲೇಶ್ ನಾಯ್ಕ, ಹರೀಶ್, ಮಹಾಂತೇಶ್ ಎಂ, ರವಿ ಹಲಗೇರಿ, ಪ್ರಕಾಶ, ಯೋಗೀಶ, ವಿದ್ಯಾ, ಎನ್‌ಆರ್‌ಎಲ್‌ಎಂ ವಿಭಾಗದ ಸಿಎಸ್ ಪವಿತ್ರಾ, ಟಿಪಿಎಂ ಪರಮೇಶ್ವರ, ಬಿಎಫ್‌ಟಿಗಳು, ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts