More

    ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ

    ವಿಜಯವಾಣಿ ಸುದ್ದಿಜಾಲ ಗಂಗಾವತಿ
    ನಗರದ 4ನೇ ವಾರ್ಡ್ ಕಿಲ್ಲಾ ಏರಿಯಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಸ್ಲಾಂಪುರ ಘಟಕದಿಂದ ಡೆಂೆ ಮತ್ತು ಮಲೇರಿಯಾ ನಿಯಂತ್ರಣ ಕುರಿತು ಜಾಗೃತಿ ಅಭಿಯಾನ ಮತ್ತು ಜನರೊಂದಿಗೆ ಸಮಾಲೋಚನ ಸಭೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಈಡಿಸ್ ಲಾರ್ವಗಳ ಸಮೀಕ್ಷೆ

    ಪ್ರತಿಯೊಂದು ಏರಿಯಾಗಳಿಗೂ ತೆರಳಿದ ಮಲೇರಿಯಾ ನಿಯಂತ್ರಣ ಘಟಕದ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ತಂಡ ರೋಗಕ್ಕೆ ಕಾರಣವಾದ ಈಡಿಸ್ ಲಾರ್ವಗಳ ಸಮೀಕ್ಷೆ ನಡೆಸಿದರು. ಸಂಗ್ರಹ ತೊಟ್ಟಿ ಮತ್ತು ನೆಲದಲ್ಲಿ ನಿಂತ ನೀರಿನಲ್ಲಿ ಕಂಡು ಬಂದ ಲಾರ್ವಗಳ ನಾಶಕ್ಕಾಗಿ ದ್ರಾವಣ ಸಿಂಪಡಿಸಲಾಯಿತು.

    ಇದನ್ನೂ ಓದಿ:ಮಲೇರಿಯಾಕ್ಕೆ ತಡೆ ಹಾಕಬೇಕೆಂದರೆ ಸೊಳ್ಳೆ ಉತ್ಪತ್ತಿ ನಿಯಂತ್ರಿಸಿ
    ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಹಿರೇಮಠ ಮಾತನಾಡಿ, ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸೊಳ್ಳೆಗಳಿಂದ ರೋಗ ಹರಡಲಿದ್ದು, ಹೂವಿನ ಕುಂಡ, ಹಳೇಟೈರ್, ಡ್ರಮ್, ನೀರು ಸಂಗ್ರಹ ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು. ಜನರಿಗೆ ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಯಿತು.


    ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್ ಬಿಚ್ಚುಕಟ್ಟಿ, ಘಟಕದ ತಾಲೂಕು ಮೇಲ್ವಿಚಾರಕ ಎಸ್.ದೇವೇಂದ್ರಗೌಡ, ಆರೋಗ್ಯ ಕಾರ್ಯಕರ್ತರಾದ ರೇಣುಕಾ, ರಮೇಶ ಸಾಲ್ಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts