More

    ಕೋವಿಡ್ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಗೆ ಬರಲೇಬೇಕು. ಇಲ್ಲದಿದ್ರೆ ಎತ್ತಾಕಿಕೊಂಡು ಬರ್ತೇವೆ; ಪ್ರತಾಪ್ ಸಿಂಹ

    ಮೈಸೂರು: ಕೋವಿಡ್ ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿ ಎತ್ತಾಕಿಕೊಂಡು ಬರಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

    ಹೋಂ ಐಸೋಲೇಷನ್  ಕಡ್ಡಾಯವಾಗಿ ರದ್ದು ಮಾಡ್ತಿವಿ.
    ಯಾರೇ ಆಗಲಿ ಆಸ್ಪತ್ರೆ ಅಥವಾ ಕೋವಿಡ್ ಸೆಂಟರ್ ಗೆ ಬರಬೇಕು.
    ಇನ್ನು ಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದಿದ್ದಾರೆ.

    ಆಡಳಿತ ಯಂತ್ರ ದಾರಿ ತಪ್ಪಿದ ಮೇಲೆ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಕೊಡಲಾಯಿತು. ಇದನ್ನು ರಾಜ್ಯಮಟ್ಟದಲ್ಲೂ ಮಾಡಿದ್ದರು. ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲೂ ಮಾಡಿ‌ ನಮ್ಮನ್ನು ನೇಮಕ‌ ಮಾಡಿದ್ರು. ನಾನು ಹೆಮ್ಮೆಯಿಂದ ಹೇಳ್ತಿನಿ. ನಾವು ಜವಾಬ್ದಾರಿ ವಹಿಸಿಕೊಂಡ ಮೇಲೆ  ಎಲ್ಲವೂ ನಿಯಂತ್ರಣಕ್ಕೆ ಬಂದಿದೆ. ಸೋರಿಕೆ‌ ತಪ್ಪಿಸಿದ್ದರಿಂದ ಆಕ್ಸಿಜನ್ ಕೊರತೆ ನಿವಾರಣೆ ಆಗಿದೆ. ಈಗಲೂ 37 ಕೆ‌‌‌ಎಲ್ ಅಷ್ಟೆ ಆಕ್ಸಿಜನ್ ಬೇಡಿಕೆ ಬರ್ತಿದೆ ಎಂದರು.

    ಚಾಮರಾಜನಗರ ಘಟನೆ ನಂತರ ಸಮಸ್ಯೆಯನ್ನು ಆಲಿಸಲು‌ ಖುದ್ದು ನಾವೇ ಫಿಲ್ಡ್‌ಗೆ ಇಳಿದ್ದೇವು. ಅದಕ್ಕಾಗಿ ಸಮಸ್ಯೆಯನ್ನ ಅರಿತು ಕೆಲಸ ಮಾಡಿ ಎಲ್ಲವನ್ನು ತಹಬದಿಗೆ ತಂದಿದ್ದೇವೆ ಎಂದು ಪ್ರತಾಪ್‌ ಸಿಂಹ ಹೇಳಿದರು.

    ಇದನ್ನೂ ಓದಿ; ಯಾಸ್ ಚಂಡಮಾರುತ; ನಾಳೆ ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts