More

    ಸೋಲಾರ್ ಪಾರ್ಕ್ ಸ್ಥಾಪನೆ ನನ್ನ ಕನಸು: ಎಚ್.ಆರ್.ಗವಿಯಪ್ಪ

    ಹೊಸಪೇಟೆ: ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸೋಲಾರ್ ಪಾರ್ಕ್ ಸ್ಥಾಪಿಸುವುದು ನನ್ನ ಕನಸಾಗಿದ್ದು, ಅದನ್ನು ಸಾಕಾರಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

    ತಾಲೂಕಿನ ಬೈಲುವದ್ದಿಗೇರಿ ಗ್ರಾಮದಲ್ಲಿ ಶನಿವಾರ ಜೆಸ್ಕಾಂ ೧೧೦/೧೧ ಕೆ.ವಿ ಸಾಮರ್ಥ್ಯ ಜೆಸ್ಕಂ ಉಪ ಕೇಂದ್ರ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿ, ಸೋಲಾರ್ ಪಾರ್ಕ್ ಸ್ಥಾಪನೆಯಿಂದ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರಿಂದ ನೇರ ಮತ್ತು ಪರೋಕ್ಷವಾಗಿ ಸಾವಿರಾರು ಯುವ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗಲಿದ್ದು, ವ್ಯಾಪಾರ, ವಹಿವಾಟು ದ್ವಿಗುಣಗೊಳ್ಳುತ್ತದೆ. ಅದರೊಂದಿಗೆ ಪ್ರತಿ ಹೋಬಳಿಗೊಂದು ಸಬ್ ಸ್ಟೇಷನ್ ನಿರ್ಮಾಣದಿಂದ ರೈತರಿಗೆ ನಿರಂತರ ಗುಣಮಟ್ಟದ ವಿದ್ಯುತ್ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಹೊಸಪೇಟೆ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಯುವುದರಿಂದ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಜಾಗೆಯನ್ನು ಗುರುತಿಸಲಾಗಿದೆ. ಕಾರ್ಖಾನೆ ಸ್ಥಾಪಿಸುವಂತೆ ಕೆಲ ಉದ್ಯಮಿಗಳನ್ನು ಸಂಪರ್ಕ ಮಾಡಲಾಗಿದೆ. ಅವರಲ್ಲಿ ಯಾರಾದರೂ ಮುಂದೆ ಬಂದಲ್ಲಿ, ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಡಲಗುವುದು ಎಂದು ಪ್ರತಿಕ್ರಿಯಿಸಿದರು.

    ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದಿರುವುದು ಪಿಕೆ ಹಳ್ಳಿ ಏತ ನೀರಾವರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ. ಕಳಪೆ ಕಾಮಗಾರಿಯಿಂದ ಭಾಗಶಃ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳನ್ನು ಕರೆದು ವಿವರ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

    ಇದೇ ವೇಳೆ ಕಾಂಗ್ರೆಸ್ ಶಾಸಕರಲ್ಲಿ ಗುಂಪುಗಾರಿಗೆ ಶುರುವಾಗಿದೆ. ನೀವು ಯಾವ ಬಣದಲ್ಲಿದ್ದೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಗವಿಯಪ್ಪ, ನಾನು ಯಾವ ಬಣದಲ್ಲಿಲ್ಲ. ಇದ್ದರೂ, ಅದನ್ನು ಬಹಿಂಗ ಪಡಿಸುವಂತಿಲ್ಲ. ಸೀಕ್ರಿಟ್ ಎಂದು ನಗೆ ಚಟಾಕಿ ಹಾರಿಸಿದರು.

    ಜಿ.ಪಂ. ಮಾಜಿ ಸದಸ್ಯರಾದ ಅನ್ನದಾನ ರೆಡ್ಡಿ, ಕೆ.ಎಂ.ಹಾಲಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮೂಕಪ್ಪ ವಕೀಲರು, ಕಾಂಗ್ರೆಸ್ ಮುಖಂಡರಾದ ಜೋಗದ ಪಂಚಪ್ಪ, ಚಿದಾನಂದಪ್ಪ ಮತ್ತಿತ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts