More

    ಗಾಳಿಯಲ್ಲಿ ಗುಂಡು ಹಾರಿಸಬೇಡಿ: ಸಿದ್ದು ಆರೋಪಕ್ಕೆ ಈಶ್ವರಪ್ಪ ವ್ಯಂಗ್ಯ

    ಶಿವಮೊಗ್ಗ: ಕರೊನಾ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುತ್ತಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಲಿ, ಸುಮ್ಮಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿ ಸರಿಯಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ‘‘ಅಧಿಕಾರಿಗಳು ನನ್ನ ಕಚೇರಿಗೆ ಬಂದರೆ ದಾಖಲೆಗಳನ್ನು ಕೊಡುತ್ತೇನೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದು ಮಾಜಿ ಸಿಎಂಗೆ ಶೋಭೆ ತರುವ ವಿಚಾರವಲ್ಲ. ಭ್ರಷ್ಟಾಚಾರ ನಡೆದಿದ್ದರೆ ಅದಕ್ಕೆ ಕಾರಣರಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸರ್ಕಾರ ಶಿಸ್ತು ಕ್ರಮ ಜರುಗಿಸುತ್ತದೆ. ಸಿದ್ದರಾಮಯ್ಯ ವೃಥಾ ಆರೋಪ ಮಾಡುವ ಬದಲು ದಾಖಲೆಗಳನ್ನು ಒದಗಿಸಬೇಕು’’ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ಇದನ್ನೂ ಓದಿ: ಆನ್​ಲೈನ್ ಪ್ರೇಮಿ ತೋಡಿದ ಹಳ್ಳಕ್ಕೆ ಬಿದ್ದು 34 ಲಕ್ಷ ರೂ. ಕಳೆದುಕೊಂಡಳು…

    ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಜ್ಯದ ಜನ ಸ್ವಾಗತಿಸಿದ್ದಾರೆ. ಕೇಂದ್ರದ ತಂಡ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ. ಸರ್ಕಾರದೊಂದಿಗೆ ನಿಂತು ಸಹಕರಿಸಬೇಕಾದ ಪ್ರತಿಪಕ್ಷ ಕಾಂಗ್ರೆಸ್ ವಿನಾ ಕಾರಣ ಟೀಕೆಯಲ್ಲಿ ತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆನ್‌ಲೈನ್ ಶಿಕ್ಷಣದ ಬಗ್ಗೆ ಇನ್ನೂ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ. ತಜ್ಞರ ಸಮಿತಿ ವರದಿ ನೀಡಿದೆಯಷ್ಟೇ. ಕರೊನಾ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಆನ್‌ಲೈನ್ ವ್ಯವಸ್ಥೆ ಬೇಡ ಎಂದಾದರೆ, ಬೇರೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಬೇಕಿದೆ ಎಂದೂ ಈಶ್ವರಪ್ಪ ಹೇಳಿದರು.

    ಪತಿ ಮೇಲೆ ಹಲ್ಲೆ ನಡೆಸಿದ ಪೊಲೀಸ್​​ಗೆ ಮಹಿಳೆ ಕಪಾಳಮೋಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts