More

    ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

    ಸಾಗರ: ಪರಿಸರ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಸಿಗಳನ್ನು ನೆಡುವುದರ ಜತೆಗೆ ಅದನ್ನು ಬೆಳೆಸಿ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನೂ ಹೊರಬೇಕು. ಆಗ ಮಾತ್ರ ವನಮಹೋತ್ಸವಕ್ಕೆ ಅರ್ಥ ಬರುತ್ತದೆ ಎಂದು ವೇದಾಗಮ ಸಂಸ್ಕೃತ ಪಾಠಶಾಲೆಯ ಮುಖ್ಯಸ್ಥ ಅನಂತ್ ಭಟ್ ಹೇಳಿದರು.

    ಪಟ್ಟಣದ ಗೀರ್ವಾಣ ಭಾರತಿ ಟ್ರಸ್ಟ್ ಮತ್ತು ವೇದಾಗಮ ಸಂಸ್ಕೃತ ಪಾಠಶಾಲೆಯಿಂದ ಆಯೋಜಿಸಿದ್ದ ಜೀವ ಪರಿಸರ ಸಂರಕ್ಷಣಾರ್ಥA ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಮನಷ್ಯನಾಗಿ ಹುಟ್ಟಿದ ಮೇಲೆ ಒಂದಷ್ಟು ಜವಾಬ್ದಾರಿಗಳ ಜತೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊರಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರಾಸಕ್ತಿ ಬೆಳೆಸಬೇಕು ಎಂದರು.
    ಟ್ರಸ್ಟ್ ಕಾರ್ಯದರ್ಶಿ ಎಂ.ಎ.ಗೌತಮ್ ಮಾತನಾಡಿ, ಮನುಷ್ಯ ಆರೋಗ್ಯವಾಗಿ ಬದುಕಲು ಶುದ್ಧ ಆಮ್ಲಜನಕ, ಕಾಲಕಾಲಕ್ಕೆ ಮಳೆ ಬರಬೇಕು. ಮನುಷ್ಯನ ರಕ್ತದ ಒತ್ತಡ ಕಡಿಮೆ ಮಾಡುವಲ್ಲಿ ವನಗಳು ಸಹಕಾರಿಯಾಗಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬAಧ ತಾಯಿ ಮಗುವಿನ ಸಂಬAಧವಾಗಿರಬೇಕು ಎಂದರು. ತಾಂತ್ರಿಕರಾದ ಭೀಮನಕೋಣೆಯ ಲಕ್ಷಿ÷್ಮÃನಾರಾಯಣ ಭಟ್, ಗೋಪಾಲಕೃಷ್ಣ ಶಾಸಿö, ಆರ್ಯ, ನಾಗೇಂದ್ರ, ಶ್ರೀಧರ್, ಅಭಿರಾಮ್, ಸ್ವಸ್ತಿಕ್, ಶಂಕರ್, ಅತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts