More

    ಪ್ರಕೃತಿ ಮುನಿದರೆ ಸರ್ವನಾಶ ; ಶಾಸಕ ಡಿ.ಸಿ.ಗೌರಿಶಂಕರ್ ಎಚ್ಚರಿಕೆ

    ತುಮಕೂರು: ಪ್ರಕೃತಿ ಮುನಿಸಿಕೊಂಡರೆ ಇಡೀ ವಿಶ್ವವೇ ಸರ್ವನಾಶವಾಗಲಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಎಚ್ಚರಿಸಿದರು.

    ಮಸ್ಕಲ್ ಶಾಲಾ ಆವರಣದಲ್ಲಿ ಶುಕ್ರವಾರ ತಾಪಂ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ರೈತರಿಗೆ 5 ಸಾವಿರ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು, ಮರಗಳನ್ನು ಪೀಠೋಪಕರಣಗಳ ನಿರ್ಮಾಣಕ್ಕೆ ಕಡಿಯಲಾಗುತ್ತಿದ್ದು, ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದ ಶುದ್ಧಗಾಳಿಯೂ ದೊರೆಯುವುದು ಕಷ್ಟವಾಗಿದೆ ಎಂದರು.

    ಫಾದರ್ಸ್‌ ಡೇ, ಮದರ್ಸ್‌ ಡೇ, ಚಿಲ್ಡ್ರನ್ಸ್ ಡೇ ಹೀಗೆ ಎಲ್ಲರೂ ವೈಯಕ್ತಿಕವಾಗಿ ಪ್ರೀತಿ ಅಭಿಮಾನತೋರಲು ಇಂತಹ ದಿನಾಚರಣೆಗಳನ್ನು ಆಚರಿಸುತ್ತಿದ್ದೇವೆ. ಆದರೆ, ಪರಿಸರ ದಿನವನ್ನು ಸ್ವಯಂಪ್ರೇರಿತರಾಗಿ ಎಲ್ಲರೂ ಆಚರಿಸಬೇಕಿದೆ. ಎಲ್ಲೋ ಒಂದು ಕಡೆ ಪ್ರಕೃತಿ ಮುನಿಸಿಕೊಂಡರೆ ಇಡೀ ಪ್ರಪಂಚವೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಕರೊನಾ ವೈರಸ್ ಹರಡಿರುವುದೇ ಸಾಕ್ಷಿ. ಹಾಗಾಗಿ, ಪರಿಸರ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಗಿಡ ನೆಟ್ಟು ಪೋಷಿಸಿ ಪ್ರಕೃತಿಯನ್ನು ಉಳಿಸಬೇಕಿದೆ ಎಂದು ತಿಳಿಸಿದರು.

    ದುಡ್ಡೇ ಜೀವನವಲ್ಲ: ಪ್ರತಿಯೊಬ್ಬರೂ ದುಡ್ಡೇ ಜೀವನ ಎಂದುಕೊಂಡಿದ್ದರೆ ತಪ್ಪು. ಕರೊನಾ ವೈರಸ್ ಇಡೀ ಜಗತ್ತಿಗೆ ಪಾಠ ಕಲಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮುಂದಿರುವ ಪ್ರಕೃತಿಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಶಾಲೆಯಲ್ಲಿ ಓದುತ್ತಿರುವ ಪ್ರತೀ ವಿದ್ಯಾರ್ಥಿಗೂ ಎರಡೆರಡು ಸಸಿ ನೀಡಿ, ಅವರೇ ಗಿಡ ನೆಟ್ಟು, ಅವರೇ ಪೋಷಿಸುವಂತಹ ಕೆಲಸವನ್ನು ಶಾಲೆಯ ಶಿಕ್ಷಕರು ಕಲಿಸಬೇಕು ಎಂದು ಗೌರಿಶಂಕರ್ ಸಲಹೆನೀಡಿದರು. ತಾಪಂ ಇಒ ಜೈಪಾಲ್, ಸಾಮಾಜಿಕ ಅರಣ್ಯಾಧಿಕಾರಿ ಪವಿತ್ರ, ವಲಯ ಅರಣ್ಯಾಧಿಕಾರಿ ಆರ್.ಎಲ್.ನಟರಾಜು, ತಾಪಂ ಸದಸ್ಯ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ರೂಪಾ , ಸದಸ್ಯರಾದ ಷಫಿ, ಅಶ್ವತ್ಥ್, ಜಯಣ್ಣ, ಪಿಡಿಒ ಕೋಮಲ, ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಹರಳೂರು ಗ್ರಾಪಂ ಅಧ್ಯಕ್ಷೆ ಶಾಂತಾ, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆಂಪಹನುಮಯ್ಯ, ಮಾಜಿ ಅಧ್ಯಕ್ಷ ಸಿದ್ಧಗಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.

    ರೈತರಿಗೆ 5 ಸಾವಿರ ಸಸಿ ವಿತರಣೆ: ಅರಣ್ಯ ಇಲಾಖೆಗೆ 70 ಸಾವಿರ ಗಿಡಗಳು ಬಂದಿದ್ದು ಹಲಸು ಮಾವು, ನೇರಳೆ, ಶ್ರೀಗಂಧ, ಬೇವು ಸೇರಿದಂತೆ ವಿವಿಧ ಜಾತಿಯ 5 ಸಾವಿರ ಸಸಿಗಳನ್ನು ರೈತರಿಗೆ ಶಾಸಕ ಗೌರಿಶಂಕರ್ ವಿತರಿಸಿದದರು.

    ಮಸ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಲು ತಹಸೀಲ್ದಾರರಿಗೆ ಸೂಚಿಸಿದ್ದೇನೆ. ಸೋಮವಾರ ತಹಸೀಲಾರ್ ಅವರನ್ನು ಒತ್ತುವರಿ ಆಗಿರುವ ಸ್ಥಳಕ್ಕೆ ಬರಲು ತಿಳಿಸಿದ್ದು, ಒತ್ತುವರಿದಾರರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ, ಪೊಲೀಸರ ಸಮ್ಮುಖದಲ್ಲೇ ಒತ್ತುವರಿ ತೆರವುಗೊಳಿಸಿ.
    ಡಿ.ಸಿ.ಗೌರಿಶಂಕರ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts