More

    ಓಂಬಡ್ಸಮನ್ ಸಹಾಯವಾಣಿ ಸಂಖ್ಯೆ ನಮೂದಿಸಿ

    ಲಕ್ಷ್ಮೇಶ್ವರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಓಂಬಡ್ಸಮನ್ ಮತ್ತು ಆಯುಕ್ತಾಲಯದ ಉಚಿತ ಸಹಾಯವಾಣಿ ಸಂಖ್ಯೆ ನಮೂದಿಸುವಂತೆ ಪಿಡಿಒಗಳಿಗೆ ಜಿಪಂ ಸಿಇಒ ಡಾ. ಸುಶೀಲಾ ಬಿ. ಅವರು ಸೂಚನೆ ನೀಡಿದರು.

    ತಾಲೂಕಿನ ಅಡರಕಟ್ಟಿ, ಪು.ಬಡ್ನಿ ಮತ್ತು ಬಟ್ಟೂರ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನಲ್ಲಿ ಸೃಜನೆಯಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಂಪೂರ್ಣ ಮಾಹಿತಿ ಒಳಗೊಂಡ ನಾಮಫಲಕ ಅಳವಡಿಸಲು ಹಣ ಮೀಸಲಿಡಲಾಗಿರುತ್ತದೆ. ನಾಮಫಲಕ ಅಳವಡಿಸಿ ಜನರಿಗೆ ಮಾಹಿತಿ ದೊರಕುವಂತೆ ಮಾಡಬೇಕು ಎಂದರು.

    ರಸ್ತೆ, ಸಿಸಿ ಗಟಾರ, ಸಿಡಿ, ಶಾಲಾ ಶೌಚಗೃಹ ಕಾಮಗಾರಿಗಳನ್ನು ಪರಿಶೀಲಿಸಿದರು. ಬಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಪರಿಶೀಲಿಸಿ ಶುಚಿ-ರುಚಿಯಾದ ಆಹಾರ ಸಿದ್ಧಪಡಿಸುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.

    ಸಿಇಒ ಆಪ್ತ ಸಹಾಯಕ ಬಿ.ಎಸ್. ಕಪರದ, ತಾಪಂ ಇಒ ಕೃಷ್ಣ ಧರ್ಮರ, ಜಗದೀಶಗೌಡ ಪಾಟೀಲ, ಪಿಡಿಒಗಳಾದ ಎಂ.ಆರ್. ಮಾದರ, ಬಿ.ಜಿ ಕನವಳ್ಳಿ, ಕಾರ್ಯದರ್ಶಿ ಎಸ್.ಕೆ. ಡಂಬಳ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ತಾಂತ್ರಿಕ ಸಹಾಯಕರಾದ ಸುರೇಶ ಬಳ್ಳಾರಿ, ವಿ.ಎಸ್. ಅಳವಂಡಿಮಠ, ಲಿಂಗರಾಜ ಅರಿಷಿಣದ, ಬಿಎಫ್‌ಟಿ ಸತೀಶ ಅರಿಷಿಣದ, ಶಿಲ್ಪಾ ಲಮಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts