More

    ಇಂಗ್ಲಿಷ್ ವಿಶ್ವದ ವ್ಯವಹಾರಿಕ ಭಾಷೆಯಾಗಿದೆ

    ರಾಯಚೂರು: ಇಂಗ್ಲಿಷ್ ಅತಿ ಹೆಚ್ಚು ಜನರು ಮಾತನಾಡುವ ವಿಶ್ವದ ವ್ಯವಹಾರಿಕ ಹಾಗೂ ಸಂವಹನ ಭಾಷೆಯಾಗಿದ್ದು, ಇಂಗ್ಲಿಷ್ ಕಲಿಕೆ ಕಷ್ಟಕರವಲ್ಲ. ಅರಿತುಕೊಂಡು ಕಲಿತರೆ ಕಲಿಕೆ ಸುಲಭವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಹನುಮಂತು ಕೊರಾಪುರ ಹೇಳಿದರು.
    ನಗರದ ಹೊರವಲಯದ ರಾಯಚೂರು ವಿವಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನಾಚರೆಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಕಲಿಕೆಯಿಂದ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಜನೆ ವೇಳೆ ಪದವಿಗಾಗಿ ಬೆನ್ನತ್ತದೆ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
    ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಮತ್ತು ವಿಷಯದಲ್ಲಿ ಪರಿಣಿತರಾಗಿರಬೇಕು. ಇಂಗ್ಲಿಷ್ ಕಲಿಕೆಯಿಂದ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಸರಳವಾಗಿ ಬದುಕಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಕೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
    ಉಪನ್ಯಾಸಕ ಡಾ.ಶರಣಬಸವರಾಜ ಮಾತನಾಡಿ, ತಂತ್ರಜ್ಞಾನದ ಇಂದಿನ ಕಾಲಮಾನದಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಗತ್ತಿನ ಸಂಸ್ಕೃತಿ, ಪರಂಪರೆಯನ್ನು ಅರಿಯಬೇಕಾದರೆ ಇಂಗ್ಲಿಷ್ ಕಲಿಕೆ ಅಗತ್ಯವಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಭಾಸ್ಕರ್ ಮಾತನಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಂವಹನದ ಪ್ರಮುಖ ಸಾಧನ ಇಂಗ್ಲಿಷ್ ಭಾಷೆಯಾಗಿದ್ದು, ವಿದ್ಯಾರ್ಥಿಗಳು ಇಂಗ್ಲಿಷ್ ಮೇಲೆ ಹಿಡಿತ ಸಾಸಲು ನಿರಂತರ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕ ರಂಜಾನ್‌ಸಾಬ್ ಉಳ್ಳಾಗಡ್ಡಿ, ವಿವಿ ಪ್ರಾಧ್ಯಾಪಕರಾದ ಡಾ.ಅನಿಲ್ ಅಪ್ರಾಳ್, ಡಾ.ಆನಂದ, ಡಾ.ಶರಣಪ್ಪ ಚಲುವಾದಿ, ಡಾ.ಪದ್ಮಜಾ ದೇಸಾಯಿ, ಡಾ.ವಿಜಯಕುಮಾರ ಸರೋದೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts