More

    ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ದಾಖಲೆ ಗೆಲುವು, ಸರಣಿ ಸಮ

    ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಎದುರಿಸಿದ್ದ ಭಾರತ ತಂಡ 2ನೇ ಟೆಸ್ಟ್ ಪಂದ್ಯವನ್ನು ಮೂರೂವರೆ ದಿನಗಳಲ್ಲೇ ಜಯಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪದಾರ್ಪಣೆಯ ಟೆಸ್ಟ್ ಆಡಿದ ಅಕ್ಷರ್ ಪಟೇಲ್ (60ಕ್ಕೆ 5) 4ನೇ ದಿನದಾಟದಲ್ಲಿ ಆಂಗ್ಲರಿಗೆ ಬೇಗನೆ ಕಡಿವಾಣ ಹಾಕಿದರು. ಈ ಮೂಲಕ ಟೀಮ್ ಇಂಡಿಯಾ ದಾಖಲೆಯ 317 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿ ಬೀಗಿತು. 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದ ವಿರಾಟ್ ಕೊಹ್ಲಿ ಬಳಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ಆಸೆಯನ್ನೂ ಜೀವಂತವಿರಿಸಿಕೊಂಡಿತು. ಸರಿಸುಮಾರು ಒಂದು ವರ್ಷದ ಬಳಿಕ ಸ್ಟೇಡಿಯಂಗೆ ಮರಳಿದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಗೆಲುವಿನ ಸ್ವಾಗತವೂ ದೊರೆತಿದ್ದು ವಿಶೇಷವಾಗಿದೆ.

    ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎಸೆದ 482 ರನ್‌ಗಳ ಕಠಿಣ ಸವಾಲಿಗೆ ಪ್ರತಿಯಾಗಿ 3 ವಿಕೆಟ್‌ಗೆ 53 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಭೋಜನ ವಿರಾಮದ ಬಳಿಕ 29 ಎಸೆತಗಳಲ್ಲೇ 164 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ನಾಯಕ ಜೋ ರೂಟ್ (33) ಮತ್ತು ಮೊಯಿನ್ ಅಲಿ (43) ತಕ್ಕಮಟ್ಟಿಗೆ ಹೋರಾಟ ತೋರಿ ಸೋಲಿನ ಅಂತರವನ್ನು ತುಸು ತಗ್ಗಿಸಿದರು.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆಲ್ರೌಂಡ್ ಆಟವಾಡಿ ಮಿಂಚಿದ ಸಚಿನ್ ಪುತ್ರ ಅರ್ಜುನ್

    ಭಾರತ ತಂಡಕ್ಕೆ ರನ್ ಅಂತರದಿಂದ ಇಂಗ್ಲೆಂಡ್ ವಿರುದ್ಧ ಇದು ಅತಿದೊಡ್ಡ ಗೆಲುವಾಗಿದೆ. 1986ರ ಲೀಡ್ಸ್ ಟೆಸ್ಟ್‌ನಲ್ಲಿ 279 ರನ್‌ಗಳಿಂದ ಜಯಿಸಿದ್ದು ಹಿಂದಿನ ದಾಖಲೆ. ಒಟ್ಟಾರೆಯಾಗಿ ಭಾರತ ತಂಡಕ್ಕೆ ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಅಂತರದಿಂದ 5ನೇ ಅತಿದೊಡ್ಡ ಗೆಲುವಾಗಿದೆ. 2015-16ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿಯಲ್ಲಿ 337 ರನ್‌ಗಳಿಂದ ಗೆದ್ದಿದ್ದು ದಾಖಲೆ. ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಸತತ 4 ಸೋಲಿನ ಬಳಿಕ ಗೆಲುವಿನ ಸವಿ ಕಂಡಿತು.

    ಭಾರತ: 329 ಮತ್ತು 286, ಇಂಗ್ಲೆಂಡ್: 134 ಮತ್ತು 54.2 ಓವರ್‌ಗಳಲ್ಲಿ 164 (ಲಾರೆನ್ಸ್ 26, ರೂಟ್ 33, ಸ್ಟೋಕ್ಸ್ 8, ಪೋಪ್ 12, ಫೋಕ್ಸ್ 2, ಮೊಯಿನ್ ಅಲಿ 43, ಅಕ್ಷರ್ ಪಟೇಲ್ 60ಕ್ಕೆ 5, ಆರ್. ಅಶ್ವಿನ್ 53ಕ್ಕೆ 3, ಕುಲದೀಪ್ 25ಕ್ಕೆ 2). ಪಂದ್ಯಶ್ರೇಷ್ಠ: ಆರ್. ಅಶ್ವಿನ್.

    *ಮೂರನೇ ಟೆಸ್ಟ್ ಪಂದ್ಯ
    (ಅಹರ್ನಿಶಿ-ಪಿಂಕ್ ಬಾಲ್ ಪಂದ್ಯ)
    ಯಾವಾಗ: ಫೆಬ್ರವರಿ 24-28
    ಆರಂಭ: ಮಧ್ಯಾಹ್ನ 2.30
    ಎಲ್ಲಿ: ಅಹಮದಾಬಾದ್

    ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಬಾಬರ್ ಅಜಮ್ ಕುಸಿತ, ಕನ್ನಡಿಗ ಕೆಎಲ್ ರಾಹುಲ್‌ಗೆ ಲಾಭ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts