More

    ಇಂಗ್ಲೆಂಡ್ ತಂಡಕ್ಕೆ ಬಾಂಗ್ಲಾದೇಶ ಎದುರು 8 ವಿಕೆಟ್ ಜಯ; ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹ

    ಅಬುಧಾಬಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ನಿರ್ವಹಣೆ ತೋರಿದ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರಲ್ಲಿ ಸತತ 2ನೇ ಜಯ ದಾಖಲಿಸಿತು. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮತ್ತೊಂದೆಡೆ, ಸತತ 2ನೇ ಸೋಲು ಕಂಡ ಬಾಂಗ್ಲಾ ತಂಡದ ಮುಂದಿನ ಹಾದಿ ಕಠಿಣಗೊಂಡಿತು.

    ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊಯಿನ್ ಅಲಿ (18ಕ್ಕೆ 2) ಆರಂಭಿಕ ಹಂತದಲ್ಲಿ ಹಾಗೂ ತೈಮಲ್ ಮಿಲ್ಸ್ (27ಕ್ಕೆ 3) ಮಧ್ಯಮ ಕ್ರಮಾಂಕದಲ್ಲಿ ಆಘಾತ ನೀಡಿದರು. ಮುಶ್ಫಿಕರ್ ರಹೀಂ (29ರನ್, 30 ಎಸೆತ, 3 ಬೌಂಡರಿ) ಕೆಲಕಾಲ ಹೋರಾಡಿದ ಪರಿಣಾಮ ಬಾಂಗ್ಲಾ ತಂಡ 9 ವಿಕೆಟ್‌ಗೆ 124 ರನ್ ಪೇರಿಸಲಷ್ಟೇ ಶಕ್ತವಾಯಿತು. ಬಳಿಕ ಈ ಅಲ್ಪಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜೇಸನ್ ರಾಯ್ (61ರನ್, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಡೇವಿಡ್ ಮಲನ್ (28*ರನ್, 25 ಎಸೆತ, 3 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 14.1 ಓವರ್‌ಗಳಲ್ಲಿ 2 ವಿಕೆಟ್‌ಗೆ 126 ರನ್‌ಗಳಿಸಿ ಜಯದ ನಗೆ ಬೀರಿತು. ಜೇಸನ್ ರಾಯ್ ಹಾಗೂ ಡೇವಿಡ್ ಮಲನ್ ಜೋಡಿ 2ನೇ ವಿಕೆಟ್‌ಗೆ 73 ರನ್ ಜತೆಯಾಟವಾಡಿದ ಫಲವಾಗಿ ಇಂಗ್ಲೆಂಡ್ ತಂಡದ ಗೆಲುವು ಸುಲಭವಾಗಿಸಿತು.

    ಬಾಂಗ್ಲಾದೇಶ: 9 ವಿಕೆಟ್‌ಗೆ 124 (ಮುಶ್ಫಿಕರ್ ರಹೀಮ್ 29, ಮೊಹಮದುಲ್ಲ 19, ನಸುಮ್ ಅಹಮದ್ 19*, ಮೊಯಿನ್ ಅಲಿ 18ಕ್ಕೆ 2, ತೈಮಲ್ ಮಿಲ್ಸ್ 27ಕ್ಕೆ 3, ಲಿಯಾಮ್ ಲಿವಿಂಗ್‌ಸ್ಟೋನ್ 15ಕ್ಕೆ 2), ಇಂಗ್ಲೆಂಡ್: 14.1 ಓವರ್‌ಗಳಲ್ಲಿ 2 ವಿಕೆಟ್‌ಗೆ 126 (ಜೇಸನ್ ರಾಯ್ 61, ಡೇವಿಡ್ ಮಲನ್ 28*, ಜಾನಿ ಬೇರ್‌ಸ್ಟೋ 8*, ಶೋರಿುಲ್ ಇಸ್ಲಾಂ 26ಕ್ಕೆ 1, ನಸುಮ್ ಅಹಮದ್ 26ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts