More

    ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿರಿ

    ಡಂಬಳ: ವಿದ್ಯಾರ್ಥಿಗಳು ಓದಿನ ಜತೆಗೆ ಇತರೆ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಬಿ.ಕೆ. ನಿಂಬನಗೌಡ್ರ ಹೇಳಿದರು.

    ಗ್ರಾಮದ ಜೆಟಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ‘ಬ್ಯಾಗ್‌ಲೆಸ್ ಡೇ’ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂಥ ಚಟುವಟಿಕೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸುವಲ್ಲಿ ಹಾಗೂ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಸಹಾಯಕವಾಗಲಿವೆ ಎಂದರು.

    ವಿದ್ಯಾರ್ಥಿಗಳು ಮಣ್ಣಿನಿಂದ ವಿವಿಧ ತರಕಾರಿಗಳು, ಎತ್ತು, ಗಣೇಶ ವಿಗ್ರಹ, ಜೋಳದ ದಂಟಿನ ಸಹಾಯದಿಂದ ಚಕ್ಕಡಿ, ಕುಂಟೆ, ನೇಗಿಲು ಉಪಕರಣದ ಜತೆಗೆ ಉತ್ತಮವಾದ ಚಿತ್ರಗಳನ್ನು ಬಿಡಿಸಿದರು. ವಿಜ್ಞಾನ, ಪರಿಸರ, ಶಾಲೆ, ತಾಜ್‌ಮಹಲ್, ಶಿವಾಜಿ ಮಹಾರಾಜರ ಚಿತ್ರಗಳು ವಿದ್ಯಾರ್ಥಿಗಳ ಪ್ರತಿಭೆಗೆ ಕನ್ನಡಿ ಹಿಡಿದವು. 9ನೇ ತರಗತಿ ವಿದ್ಯಾರ್ಥಿ ಹಾಲೇಶ ಗುಡ್ಡದ ಬಿಡಿಸಿದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ರೇಖಾಚಿತ್ರ ಗಮನ ಸೆಳೆಯಿತು. ಎಸ್.ಎನ್. ಕಲ್ಲಿಗನೂರ, ಶಾಂತಲಾ ಹಂಚಿನಾಳ, ಪ್ರಕಾಶ ತಳವಾರ ಮಾತನಾಡಿದರು. ಎ.ವಿ. ಹಿರೇಮಠ, ಜಗದೀಶ್ವರಿ ಕವಳಿಕಾಯಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts