More

    ಇಂಗ್ಲೆಂಡ್ ತಂಡಕ್ಕೆ ಪೋಪ್-ಬಟ್ಲರ್ ಆಸರೆ

    ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವೇಗಿಗಳ ದಾಳಿ ಎದುರು ಆಘಾತ ಎದುರಿಸಿದ್ದ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಒಲಿವರ್ ಪೋಪ್ (91*, 142 ಎಸೆತ. 11 ಬೌಂಡರಿ) ಹಾಗೂ ಜೋಸ್ ಬಟ್ಲರ್ (56*ರನ್, 120 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿ ನಿರ್ಣಾಯಕ 3ನೇ ಟೆಸ್ಟ್ ಪಂದ್ಯದಲ್ಲಿ ಆಸರೆಯಾಗಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ವಿಂಡೀಸ್, ಆರಂಭದಲ್ಲೇ ಇಂಗ್ಲೆಂಡ್‌ಗೆ ಕಡಿವಾಣ ಹೇರಿತು. ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್ (57ರನ್, 147 ಎಸೆತ, 4 ಬೌಂಡರಿ) ಅರ್ಧಶತಕದಾಟದ ನಡುವೆಯೂ ಕೇಮರ್ ರೋಚ್ (56ಕ್ಕೆ 2) ಆರಂಭಿಕ ಹಂತದಲ್ಲಿ ಆತಿಥೇಯ ತಂಡಕ್ಕೆ ಆಘಾತ ನೀಡಿದರು. ಸಿಬ್ಲೆ (0) ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರೆ, ನಾಯಕ ಜೋ ರೂಟ್ (17) ರನೌಟ್ ಬಲೆಗೆ ಬಿದ್ದರು, ಬೆನ್ ಸ್ಟೋಕ್ಸ್ (20) ವಿಫಲರಾದರು. ಇದರಿಂದ ಇಂಗ್ಲೆಂಡ್ 122 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಒಲಿವರ್ ಪೋಪ್ ಹಾಗೂ ಜೋಸ್ ಬಟ್ಲರ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 136 ರನ್ ಜತೆಯಾಟವಾಡಿದ ಫಲವಾಗಿ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 85.4 ಓವರ್‌ಗಳಲ್ಲಿ 4 ವಿಕೆಟ್‌ಗೆ 258 ರನ್ ಪೇರಿಸಿದೆ. 3 ಪಂದ್ಯಗಳ ಸರಣಿ 1-1 ರಿಂದ ಸಮಬಲದಲ್ಲಿದೆ.

    ಇಂಗ್ಲೆಂಡ್ ಪ್ರಥಮ ಇನಿಂಗ್ಸ್: ಮೊದಲ ದಿನದಾಟದ ಅಂತ್ಯಕ್ಕೆ 85.4 ಓವರ್‌ಗಳಲ್ಲಿ 4 ವಿಕೆಟ್‌ಗೆ 258 (ಬರ್ನ್ಸ್ 57, ಸಿಬ್ಲೆ 0, ರೂಟ್ 17, ಸ್ಟೋಕ್ಸ್ 20, ಒಲಿವರ್ ಪೋಪ್ 91*, ಜೋಸ್ ಬಟ್ಲರ್ 56*, ರೋಚ್ 56ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts