More

    ಕರೊನಾ ಅಂತ್ಯದ ಆರಂಭ; ವಿಶ್ವದ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಭಾರತ ಚಾಲನೆ

    ಇಡೀ ವಿಶ್ವವನ್ನು ಕಾಡುತ್ತಿರುವ ಮಹಾಮಾರಿ ಕರೊನಾಕ್ಕೆ ಅಂತ್ಯ ಹಾಡುವ ನಿರ್ಣಾಯಕ ಘಟ್ಟದ ಸಮರ ಆರಂಭಿಸಿರುವ ಭಾರತ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಆತ್ಮನಿರ್ಭರ ಭಾರತ ಸಂಕಲ್ಪದಡಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಯ ಬೃಹತ್ ಅಭಿಯಾನಕ್ಕೆ ಶನಿವಾರ ದೇಶಾದ್ಯಂತ ಚಾಲನೆ ದೊರೆಯಿತು. 3000ಕ್ಕೂ ಅಧಿಕ ಕೇಂದ್ರಗಳಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಿ ಇತಿಹಾಸದ ಪುಟ ಸೇರಿತು. ಕರ್ನಾಟಕದಲ್ಲೂ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆಯಿತು.

    ಭರವಸೆಯ ಹೆಜ್ಜೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಹುನಿರೀಕ್ಷಿತ ಕರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದರೊಂದಿಗೆ ಭಾರತ ಕರೊನಾ ಮುಕ್ತ ದೇಶವಾಗುವತ್ತ ಮೊದಲ ಹೆಜ್ಜೆ ಇರಿಸಿದೆ. ಕರ್ನಾಟಕದ 243 ಕೇಂದ್ರಗಳೂ ಸೇರಿದಂತೆ ದೇಶಾದ್ಯಂತ 3006 ಕೇಂದ್ರಗಳಲ್ಲಿ ಯಾವುದೇ ವಿಘ್ನ, ದೋಷಗಳಿಲ್ಲದಂತೆ 1.91 ಲಕ್ಷ ಮಂದಿಗೆ ಲಸಿಕೆ ಹಾಕಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಇದು ಕರೊನಾ ಅಂತ್ಯದ ಆರಂಭ ಎಂದರು. ಯಾವುದೇ ವದಂತಿ ನಂಬದೆ ಭಾರತದ ಮೇಲೆ ವಿಶ್ವಾಸವಿಟ್ಟು ಲಸಿಕೆ ಪಡೆಯುವಂತೆ ದೇಶದ ಜನತೆಗೆ ಮನವಿ ಮಾಡಿದರು.

    ಭಾರತದ ಹೆಗ್ಗಳಿಕೆ

    • ವಿಶ್ವದ 100 ದೇಶಗಳು 3 ಕೋಟಿ ಜನಸಂಖ್ಯೆ ಹೊಂದಿವೆ. ಭಾರತವೊಂದೇ ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ನೀಡಿದೆ, ಕೋವಿಶೀಲ್ಡ್, ಕೊವ್ಯಾಕ್ಸಿನ್ ದರ 200 ರೂ. ಆಸುಪಾಸಿನಲ್ಲಿದ್ದರೆ ವಿದೇಶಿ ಲಸಿಕೆಗಳ ಪ್ರತಿ ಡೋಸ್ ಬೆಲೆ 5 ಸಾವಿರ ರೂ.ಗಿಂತ ಹೆಚ್ಚು
    • ವಿದೇಶಿ ಲಸಿಕೆಗಳನ್ನು ಮೈನಸ್ 70 ಡಿಗ್ರಿಯಲ್ಲಿ ದಾಸ್ತಾನಿರಿಸಬೇಕು, ಆದರೆ ನಮ್ಮ ಲಸಿಕೆಗೆ 2 ರಿಂದ 8 ಡಿಗ್ರಿ ಸೆಲ್ಶಿಯಸ್ ಸಾಕು

    ಯಾರಿಗೆ ಮೊದಲ ಲಸಿಕೆ?

    • ಏಮ್್ಸ ದೆಹಲಿಯಲ್ಲಿ ಮೊದಲ ಲಸಿಕೆ ಡೋಸ್ ಪಡೆದವರು ಪೌರ ಕಾರ್ವಿುಕ ಮನೀಶ್ ಕುಮಾರ್.
    • ಬಿಜೆಪಿಯ ಡಾ.ಮಹೇಶ್ ಶರ್ಮಾ ಮೊದಲ ಡೋಸ್ ಲಸಿಕೆ ಪಡೆದ ಮೊದಲ ಸಂಸದ.
    • ಸೆರಂ ಇನ್​ಸ್ಟಿಟ್ಯೂಟ್​ನ ಸಿಇಒ ಆಧಾರ್ ಪೂನಾವಾಲಾ ಆರೋಗ್ಯ ಸೇವಾಕರ್ತರೆಂಬ ನೆಲೆಯಲ್ಲಿ ಮೊದಲ ಲಸಿಕೆಯನ್ನು ಪಡೆದುಕೊಂಡರು.

    ಭಾವುಕರಾದ ಮೋದಿ

    • ಕರೊನಾ ವಾರಿಯರ್​ಗಳ ಸೇವೆ, ತ್ಯಾಗದ ವಿಚಾರ ಪ್ರಸ್ತಾಪಿಸುವಾಗ ಮೋದಿ ಭಾವುಕ ರಾದರು. ಒಟ್ಟಾರೆ ಅವರು ಹೇಳಿದ್ದಿಷ್ಟು
    • ಸಾವಿರಾರು ವಾರಿಯರ್​ಗಳು ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ
    • ಅನೇಕರು ಕಾರ್ಯನಿರ್ವಹಿಸುತ್ತಲೇ ಅಸುನೀಗಿದ್ದಾರೆ
    • ಒಂದೊಂದು ಜೀವ ಉಳಿಸುವುದಕ್ಕೂ ತಮ್ಮ ಜೀವ ಸಮರ್ಪಿಸಿದ್ದಾರೆ
    • ಭಾರತದ ಲಸಿಕೆ ಬಗ್ಗೆ ಜಗತ್ತಿನಾದ್ಯಂತ ಭಾರಿ ವಿಶ್ವಾಸ ವ್ಯಕ್ತವಾಗಿದೆ
    • ಜಗತ್ತಿನ ಬಹುತೇಕ ಮಕ್ಕಳಿಗೆ ನೀಡುವ ಲಸಿಕೆ ಭಾರತದಿಂದಲೇ ರವಾನೆಯಾಗುತ್ತಿದೆ

    ರಾಜ್ಯದಲ್ಲಿ ಶೇ. 62 ಸಾಧನೆ

    ಬೆಂಗಳೂರು: ಕರ್ನಾಟಕದಲ್ಲಿ ಮೊದಲ ದಿನವೇ ಶೇ. 62 ಮಂದಿ ಲಸಿಕೆ ಪಡೆದುಕೊಳ್ಳುವ ಮೂಲಕ ಅಭಿಯಾನ ಯಶಸ್ವಿಯಾಗಿದೆ. ರಾಜ್ಯದ 243 ಕೇಂದ್ರಗಳಲ್ಲಿ ನಡೆದ ಅಭಿಯಾನದಲ್ಲಿ ಆಸ್ಪತ್ರೆಗಳ ಸಿಬ್ಬಂದಿ ಲಸಿಕೆ ಪಡೆದರು. ಕೊಡಗು ಜಿಲ್ಲೆಯಲ್ಲಿ ಶೇ. 84, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ಮಂದಿ ಲಸಿಕೆ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 37 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆ ಸೇರಿದಂತೆ ದೇಶಾದ್ಯಂತ ಏಕಕಾಲಕ್ಕೆ ನಡೆದ ಅಭಿಯಾನಕ್ಕೆ ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೆಂಗಳೂರಿನಿಂದ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಆರೋಗ್ಯ ಸಚಿವ ಡಾ. ಸುಧಾಕರ್ ಭಾಗವಹಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯ ಕೆ. ನಾಗರತ್ನಾ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಮೊದಲಿಗರು. ಬಳಿಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಸೇರಿ ಕೆಲ ವೈದ್ಯರು ಲಸಿಕೆ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts