More

    ಮಹಿಳೆಯ ಸಾಧನೆಗೆ ಪ್ರೋತ್ಸಾಹ ನೀಡಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಹೆಣ್ಣು ಮಕ್ಕಳಿಗೆ ಮಾನಸಿಕ ಸಾಮರ್ಥ್ಯ, ಧೈರ್ಯ ತುಂಬುವುದರ ಜತೆಗೆ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮತ್ತು ಅವರ ಜೀವನೋಪಾಯದ ಹಲವು ಕಾರ್ಯಕ್ರಮ ಆಯೋಜನೆ ರೂಪಿಸಿ ಅವಳಿಗೆ ಸಾತ್ವಿಕ ಶಕ್ತಿ ತುಂಬುವುದು ಅವಶ್ಯಕ ಎಂದು ವಿಮರ್ಶಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
    ನಗರದ ಪವನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಸ್ನೇಹ ಸಂಗಮ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಮಹಿಳಾ ದಿನ ಹಾಗೂ ಉಪನ್ಯಾಸ ಸಾಧಕ ಸನ್ಮಾನ ಮತ್ತು ಸಾಂಸತಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳೆಯರ ಮಾನಸಿಕ ಶಕ್ತಿ, ಸಾಮರ್ಥ್ಯ, ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಮನೆತನದ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ಸಾಗಿಸಲು ಕೆಲ ಪುರುಷರು ಮಹಿಳೆಯರನ್ನು ಉದ್ಯೋಗಕ್ಕೆ ಕಳುಹಿಸಲು ಹಿಂಜರಿಯುತ್ತಾರೆ. ಕುಟುಂಬದ ಪೋಷಣೆ, ಹೂಡಿಕೆ, ಉಳಿತಾಯ, ವ್ಯಾಪಾರ ವ್ಯವಹಾರ ನಿಭಾಯಿಸುವಲ್ಲಿ ಮಹಿಳೆಯರು ಸಹ ಸಮರ್ಥರಾಗಿದ್ದು ಅವರ ಕಠಿಣ ಪರಿಶ್ರಮದ ಸಾಧನೆಗೆ ಮೆಚ್ಚಿ ಸಹಕಾರ ನೀಡುವಂತಾಗಬೇಕು ಎಂದರು.
    ಶುಭಾಂಗಿನಿ ಪೂಜಾರಿ ಮಾತನಾಡಿ, ಕುಟುಂಬಕ್ಕಾಗಿ ಸರ್ವಸ್ವವನ್ನು ಸರ್ಮಪಿಸುವ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಕಾಳಜಿ, ಎಚ್ಚರಿಕೆ ವಹಿಸಬೇಕು. ಕೆಲಸದ ಒತ್ತಡ, ಮಾನಸಿಕ ಒತ್ತಡ ಮತ್ತು ವಿಶ್ರಾಂತಿ ರಹಿತ ಜೀವನ ಶೈಲಿಯಿಂದ ಅನೇಕ ರೀತಿಯ ರೋಗಗಳು ಹೆಣ್ಣು ಮಕ್ಕಳನ್ನು ಬಾಧಿಸುತ್ತಿವೆ. ಇದರಿಂದ ಹೊರಗೆ ಬರಲು ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
    ಮಹಿಳಾ ಸ್ನೇಹ ಸಂಗಮ ಸಂಚಾಲಕಿ ರತ್ನಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರಾದ ಸುಜಾತಾ ಗುರುವ, ನಾಗರತ್ನಾ ಹಡಗಲಿ, ವಿಜೇತಾ ವೇರ್ಣೇಕರ, ಮಂಗಲಾ ನೀಲಗುಂದ, ಶಾಂತಾ ಶೀಲವಂತ, ಡಾ.ಅರ್ಪರೋಜಾ ಕಾಟೇವಾಡಿ, ಪಾರ್ವತಿ ಹೊಂಗಲ, ಗೌರಿ ಬೆಲ್ಲದ, ಸವಿತಾ ಪಾಟೀಲ ಅವರಿಗೆ ಗೌರವಿಸಲಾಯಿತು.
    ವೀಣಾ ಹೊಸಮನಿ, ಶೋಭಾ ನಾಗನೂರ. ಪ್ರಜ್ಞಾ ನಡಕಟ್ಟಿ, ಇತರರು ಇದ್ದರು. ಬಳಿಕ ಮಹಿಳೆಯರಿಂದ ವಚನ ನೃತ್ಯ, ಜಾನಪದ ನೃತ್ಯ, ನಾಟಕ, ಸಂಗೀತ ಸೇರಿ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.
    ಹೇಮಾಕ್ಷಿ ಕಿರೇಸೂರ ಸ್ವಾಗತಿಸಿದರು. ಸಂಚಾಲಕಿ ಸವಿತಾ ಅಮರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಬಿರಾದಾರ ನಿರೂಪಿಸಿದರು. ಶಿವಲೀಲಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts