More

    ಕಲಿಕೋತ್ಸಾಹ ಹೆಚ್ಚಳಕ್ಕೆ ಅನುಕೂಲ

    ಕೊಟ್ಟೂರು: ಕಲಿಕಾ ಸಾಮರ್ಥ್ಯ ಮತ್ತು ಫಲಿತಾಂಶ ಹೆಚ್ಚಿಸುವಲ್ಲಿ ಕಾರ್ಯಾಗಾರಗಳು ತುಂಬಾ ಪರಿಣಾಮಕಾರಿಯಾಗಿವೆ ಎಂದು ಪ್ರಾಚಾರ್ಯ ಡಾ.ಸೋಮಶೇಖರ್ ಹೇಳಿದರು.

    ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ವಿಜಯನಗರ ಪಪೂ ಕಾಲೇಜು, ಆಂಗ್ಲಭಾಷಾ ಉಪನ್ಯಾಸಕರ ವೇದಿಕೆ ಹಾಗೂ ತಾಲೂಕು ಉಪನ್ಯಾಸಕರ ಸಂಘದಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಆಂಗ್ಲಭಾಷಾ ಬೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಇದನ್ನೂ ಓದಿ: ಆಧುನಿಕ ಬೋಧನಾ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

    ವಿದ್ಯಾರ್ಥಿಗಳು ಆಸಕ್ತಿಯಿಂದ ಇಂಗ್ಲಿಷ್ ವಿಷಯದ ಪಾಠವನ್ನು ಆಲಿಸಿದರೆ ಆಂಗ್ಲಭಾಷಾ ಸಾಮರ್ಥ್ಯ ಹೆಚ್ಚಲಿದೆ. ಸುಲಭವಾಗಿ ಮತ್ತು ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಪಡೆಯಲು ಸಾಧ್ಯ. ಇಂತಹ ಕಾರ್ಯಾಗಾರಗಳು ಮಕ್ಕಳಲ್ಲಿ ಕಲಿಕೋತ್ಸಾಹ ಹೆಚ್ಚುಸುತ್ತದೆ. ಮೇಲಿಂದ ಮೇಲೆ ಆಂಗ್ಲಭಾಷಾ ವೇದಿಕೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದರು.

    ಸಂಪನ್ಮೂಲ ಉಪಾನ್ಯಸಕರಾಗಿ ಹೂವಿನಹಡಗಲಿಯ ಕೊಟ್ರಗೌಡ್ರು, ಕಾಳೇಶ್, ಪರಶುರಾಮಪ್ಪ ನಾಗೂಜೆ, ರೇವಣ್ಣ, ಇಮ್ರಾನ್, ಬಸವರಾಜ ತರಬೇತಿ ನೀಡಿದರು. 560ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕರ ಡಾ.ಜಗದೀಶ್ ಚಂದ್ರಬೋಸ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts