More

    ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ತಂದೆ-ತಾಯಿ ಮಕ್ಕಳಲ್ಲಿನ ಕಲೆ ಗುರುತಿಸಿ ಪ್ರೋತ್ಸಾಹ ನೀಡುವುದು ಅತ್ಯಂತ ಮುಖ್ಯ ಎಂದು ಅನನ್ಯ ಫೀಡ್ಸ್​ ಸಂಸ್ಥಾಪಕ ದಿವಾಣ ಭಟ್​ ಅಭಿಪ್ರಾಯಪಟ್ಟರು.
    ನಗರದ ಸಾಕಾರ ಮತ್ತು ಮಾಧ್ಯಮ ಪ್ರತಿಷ್ಠಾನ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರ ಸಮಾರೋಪ ಸಮಾರಂಭ, ಪ್ರದರ್ಶನದಲ್ಲಿ ಅವರು ಮಾತನಾಡಿದರು.
    ಯಗಾನ ಕಲೆ ಅಪ್ಪಟ ಕನ್ನಡ ಕಲೆಯಾಗಿದ್ದು, ನೃತ್ಯ, ಸಂಗೀತ, ಸಾಹಿತ್ಯ, ನಾಟಕ ಹೀಗೆ ಎಲ್ಲ ಕಲಾ ಪ್ರಕಾರಗಳನ್ನು ಒಳಗೊಂಡ ಶ್ರೀಮಂತ ಕಲೆಯಾಗಿದೆ. ಈ ಕಲೆಗೆ ಅಪಾರ ಮನ್ನಣೆ ಇದ್ದು, ಮಕ್ಕಳು ಈ ಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದರು.
    ಸುರೇಶ ಭಟ್​ ಮಾತನಾಡಿ, ಇಂದಿನ ಯುವಕರು ನಮ್ಮ ಕಲೆ ಮತ್ತು ಸಂಸತಿಯಿಂದ ವಿಮುಖರಾಗದೆ ಇರಲು ಇಂತಹ ಶಿಬಿರದ ಮೂಲಕ ಕಲೆಗಳಲ್ಲಿ ಆಸಕ್ತಿ ಮೂಡಿಸಬೇಕು. ಇಲ್ಲವಾದರೆ ಮಕ್ಕಳು ಇಂತಹ ಕಲೆಗಳನ್ನು ಕೇವಲ ಚಿತ್ರಗಳಲ್ಲಿ ನೋಡಬೇಕಾಗಬಹುದು. ನಮ್ಮ ಸಂಸ್ಥೆ ಮೂಲಕ ಚೆಂಡೆ, ಮದ್ದಳೆ, ಯಗಾನದ ತರಬೇತಿಗಳನ್ನು ನುರಿತ ಗುರುಗಳಿಂದ ನೀಡಲಾಗುತ್ತಿದೆ ಎಂದರು.
    ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಚಕ್ರವ್ಯೂಹ&ಸೈಂಧವ ವಧೆ ಯಗಾನ ಪ್ರಸಂಗ ಪ್ರಸ್ತುತಪಡಿಸಿದರು. ಭಾಗವತಿಕೆಯಲ್ಲಿ ಗುರು ಪರಮೇಶ್ವರ ಹೆಗಡೆ ಐನಬೈಲು, ಮಂಜುನಾಥ ಹೆಗಡೆ, ಮದ್ದಳೆಯಲ್ಲಿ ಶ್ರೀಪಾದ ಭಟ್​ ಮೂಡುಗಾರು, ಚಂಡೆಯಲ್ಲಿ ನಾರಾಯಣ ಕೊಮಾರ, ಅದಿತಿ ಎಸ್​. ಸಹಕರಿಸಿದರು.
    ಪ್ರಕಾಶ ಭಟ್​, ವಿದುಷಿ ಸವಿತಾ ಹೆಗಡೆ, ಎನ್​. ಭಾಸ್ಕರ, ಪ್ರೊ. ರವೀಂದ್ರ, ಡಾ.ಸುನೀಲ, ಡಾ. ಶಮಿರ್ಳಾ, ಅನಿತಾ ಪುರಾಣಿಕ, ಶಾರದಾ ದಾಬಡೆ, ನರಸಿಂಹ ಸ್ವಾಮಿ, ಇತರರು ಇದ್ದರು. ಡಾ. ಶುಭದಾ ಸ್ವಾಗತಿಸಿದರು. ಶಶಿಕಲಾ ಜೋಶಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts