ಚಿಕ್ಕಮಗಳೂರು: ಸುದೀರ್ಘ ಕಾಲದಿಂದ ಸುಸ್ತಿಯಾಗಿ ಉಳಿದಿರುವ ಬ್ಯಾಂಕ್ಗಳ ಸಾಲ ವಸೂಲಿಗೆ ಕ್ರಮಕೈಗೊಳ್ಳುವ ಮೂಲಕ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬ್ಯಾಂಕ್ ನೌಕರರ ಒಕ್ಕೂಟದ ಆಶ್ರಯದಲ್ಲಿ ಎಸ್ಬಿಐ ಹೊಸಮನೆ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದರು.
ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಬ್ಯಾಂಕ್ ನೌಕರರ ಕೆಲಸ ವಾರದಲ್ಲಿ ಐದು ದಿನವನ್ನಾಗಿಸಿ ಜಾರಿ ಮಾಡಬೇಕು. ಬ್ಯಾಂಕ್ಗೆ ಸುಸ್ತಿಯಾಗಿ ಉಳಿದ ಸಾಲದ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಅಧಿಕಾರಿಗಳಿಗೆ ನಿಗದಿತ ಕೆಲಸದ ಸಮಯ ಜಾರಿಯಾಗಬೇಕು. ಕಾಯಂ ಹುದ್ದೆಗಳಿಗೆ ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಾದೇಶಿಕ ಕಾರ್ಯದರ್ಶಿ ಜಯಪ್ರಕಾಶ್, ಕಿಶೋರ್ಕುಮಾರ್, ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ಅರ್ಪಣ, ಮೇರಿ, ನಿವೃತ್ತ ನೌಕರ ಎಸ್.ಟಿ.ಹಾಲಪ್ಪ ಇದ್ದರು.