More

    ಉದ್ಯೋಗ ಮೇಳದ ಸದ್ಬಳಕೆ ಮಾಡಿಕೊಳ್ಳಿ:ತರಬೇತುದಾರ ಹನುಮೇಶ ತೊಂಡಿಹಾಳ ಸಲಹೆ

    ಕನಕಗಿರಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಮೇಳ, ಸಂದರ್ಶನದಂತಹ ಕಾರ್ಯಕ್ರಮಗಳು ಅಭ್ಯರ್ಥಿಗಳಿಗೆ ಉದ್ಯೋಗ ದೊರೆಯಲು ಸಹಕಾರಿಯಾಗಿವೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಮಾಲೋಚಕ ಮತ್ತು ತರಬೇತುದಾರ ಹನುಮೇಶ ತೊಂಡಿಹಾಳ ಹೇಳಿದರು.


    ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಸಿಐಸಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಸಂದರ್ಶನದಲ್ಲಿ ಶುಕ್ರವಾರ ಮಾತನಾಡಿದರು.


    ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ನಂತರ ಉದ್ಯೋಗ ಅರಸಿ ಅಲೆದಾಡುವುದು ಸಹಜ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪದವಿ ಹಂತ ಮುಗಿಯುತ್ತಿರುವಾಗಲೇ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಖಾಸಗಿ ಸಂಸ್ಥೆಗಳು ಹಮ್ಮಿಕೊಂಡು ಉದ್ಯೋಗ ಒದಗಿಸಿ ನಿರುದ್ಯೋಗ ಸಮಸ್ಯೆ ಕಡಿಮೆಗೊಳಿಸುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ಅಭ್ಯರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಇದನ್ನೂ ಓದಿ: ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗ ಮೇಳ


    ಆ್ಯಕ್ಸಿಸ್ ಬ್ಯಾಂಕಿನ ಮಾನವ ಸಂಪನ್ಮೂಲ ಅಧಿಕಾರಿ ಶಿವಕುಮಾರ ಮಾತನಾಡಿ, ಅಭ್ಯರ್ಥಿಗಳು ವೃತ್ತಿ ಕೌಶಲ ಮೈಗೂಡಿಸಿಕೊಂಡರೆ ಉತ್ತಮ ಹುದ್ದೆ ಪಡೆಯಲು ಸಾಧ್ಯ ಎಂದರು.ಕಾಲೇಜು ಪ್ರಾಚಾರ್ಯ ಡಾ.ಸರ್ಫರಾಜ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶೋಭಾ ಎಸ್. ಕಣ್ಣಿ, ಡಾ.ವೀರೇಶ, ಮರ್ವಿನ್ ಡಿಸೋಜಾ, ತಬಸ್ಸುಮ್ ಆರಾ, ಡಾ.ಎಚ್.ಸಿ ಆಶೀಕಾ, ಗೋಪಾಲರೆಡ್ಡಿ ಮಾದಿನಾಳ, ಮಾರುತೇಶ, ಮಾಲತಿ, ಅನಿತಾ, ಮಂಜುಳಾ, ಶಾಂತಾ, ದೇವೇಂದ್ರಪ್ಪ, ಐಸಿಸಿಐ ಬ್ಯಾಂಕ್‌ನ ಕಿರಿಯ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಗೊಂಡಬಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts