More

    ಎಲಾನ್ ಮಸ್ಕ್​ಗೆ ಶಾಕ್​: “x”(ಎಕ್ಸ್​)ಗೆ 3.21ಕೋಟಿ ರೂ. ದಂಡ- ಕಾರಣ ಇದೇ…

    ಕ್ಯಾನ್ಬೆರಾ(ಆಸ್ಟ್ರೇಲಿಯಾ): ಎಲೋನ್ ಮಸ್ಕ್‌ ಅವರ ಮೈಕ್ರೋಬ್ಲಾಗಿಂಗ್​ ಸೈಟ್​ “x”(ಎಕ್ಸ್​)ಗೆ ಆಸ್ಟ್ರೇಲಿಯನ್ ಇ-ಸೇಫ್ಟಿ ಕಮಿಷನ್​ ಭಾರಿ ದಂಡ ವಿಧಿಸಿದೆ. 86ಸಾವಿರ ಡಾಲರ್​ಗಳ ಈ ದಂಡ ಭಾರತೀಯ ಕರೆನ್ಸಿಯಲ್ಲಿ 3-2 ಕೋಟಿ ರೂ.ಗೆ ಸಮಾನವಾಗಿದೆ.

    ಇದನ್ನೂ ಓದಿ: ಉದ್ಯಮಿಯಿಂದ ಲಂಚ ಪಡೆದು ಅಧಿವೇಶನದಲ್ಲಿ ಪ್ರಶ್ನೆ ಕೇಳಿದ ಆರೋಪ; ಟಿಎಂಸಿ ಸಂಸದೆ ವಿರುದ್ಧ ಸ್ಪೀಕರ್​ಗೆ ದೂರು ನೀಡಿದ ಬಿಜೆಪಿ

    ಸಾಮಾಜಿಕ ಮಾಧ್ಯಮಗಳ ಮೇಲೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್​ ಮೇಲೆ ನಿತ್ಯ ನಿಗಾ ಇಡಲಾಗುತ್ತದೆ. ಆಯಾ ರಾತ್ರಿ ಈ ತರಹದ ಕಂಟೆಂಟ್​ಗಳನ್ನು ಇಷ್ಟು ತ್ವರಿತವಾಗಿ ಗುರುತಿಸಿದರು? ಪರಿಶೀಲಿಸಿದರು ಎಂಬ ಬಗ್ಗೆ ನಿಯಂತ್ರಣ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿರುತ್ತವೆ. ಆದರೆ ಎಕ್ಸ್​ ಚೈಲ್ಡ್​ ಅಬ್ಯೂಸ್​(ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣ ಸಂಬಂಧ ತನಿಖೆಗೆ ಸಹಕರಿಸಲು ನಿರಾಕರಿಸಿತ್ತು. ಇದು ಆಸ್ಟ್ರೇಲಿಯಾದ ಇ-ಸೇಫ್ಟಿ ಕಮಿಷನ್ (ನಿಯಂತ್ರಣ ಪ್ರಾಧಿಕಾರ)ದ ಕೆಮಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ದಂಡ ವಿಧಿಸಿದೆ.

    ಇದು ಕಂಟೆಂಟ್​ ನಿಯಂತ್ರಣದಲ್ಲಿ ವಿಫಲವಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ದಂಡ ವಿಧಿಸಿರುವುದು ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳಿಗೆ ಪ್ರತಿಕ್ರಿಯಿಸಲು ತೆಗೆದುಕೊಂಡ ಸಮಯ ಮತ್ತು ಅದನ್ನು ಪತ್ತೆಹಚ್ಚಲು ಬಳಸಿದ ವಿಧಾನಗಳು, ಜಾಹೀರಾತುದಾರರನ್ನು ಹಿಡಿದಿಡ್ಡುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಎಕ್ಸ್​ಗೆ ಪ್ರಬಲ ಹೊಡೆತ ಬಿದ್ದಿದೆ ಎನ್ನಬಹುದು.

    ಭಾರತದಲ್ಲೂ ನೋಟೀಸ್:
    ದೇಶದ ಎಲೆಕ್ಟ್ರಾನಿಕ್ಸ್​ ಮತ್ತು ಇನ್ಫರ್ಮೇಷನ್​ ಟೆಕ್ನಾಲಜಿ ಸಚಿವಾಲಯ(meity) ಸಹ ಮಕ್ಕಳ ಲೈಂಗಿಕ ಕಿರುಕುಳ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ಲಾಟ್‌ಫಾರ್ಮ್‌ನಿಂದ ಕೂಡಲೇ ತೆಗೆದುಹಾಕಬೇಕೆಂದು ನೋಟೀಸ್​ಗಳನ್ನು ಜಾರಿಗೊಳಿಸಿ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಸುಧಾರಿತ ಅಲ್ಗಾರಿಥಮ್​, ರಿಪೋರ್ಟಿಂಗ್​ ಮೆಕಾನಿಸಮ್ ನಂತಹ ತ್ವರಿತಗತಿಯಲ್ಲಿ ಕೆಲಸ ಮಾಡುವ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಇದನ್ನು ಪಾಲಿಸದಿದ್ದರೆ 2021 ರೂಲ್ 3(1)(ಬಿ), ಮತ್ತು ರೂಲ್ 4(4) ಉಲ್ಲಂಘನೆಯೆಂದು ಪರಿಗಣಿಸಲಾಗುವುದು. ಈ ಉಲ್ಲಂಘನೆ ದೃಡಪಟ್ಟರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಅಕ್ರಮವಾಗಿ ಜಲಗಡಿ ಪ್ರವೇಶಿಸಿದ ಆರೋಪ; ಭಾರತದ 27 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts