More

    11ಕ್ಕೆ ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ

    ತೀರ್ಥಹಳ್ಳಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳ ಅಮಾವಾಸ್ಯೆ ಜಾತ್ರಾ ಮಹೋತ್ಸವ ಜ.11, 12 ಮತ್ತು 13ರಂದು ನಡೆಯಲಿದೆ. 18 ಲಕ್ಷ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ಜಾತ್ರೆ ನೆಡೆಸಲು ತೀರ್ಮಾನಿಸಲಾಗಿದೆ ಎಂದು ತೆಪ್ಪೋತ್ಸವ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ತಿಳಿಸಿದರು.

    ಜ.11ಕ್ಕೆ ತುಂಗಾ ನದಿಯ ರಾಮಕುಂಡದಲ್ಲಿ ತೀರ್ಥಸ್ನಾನ, 12ಕ್ಕೆ ಬ್ರಹ್ಮರಥೋತ್ಸವ ಮತ್ತು 13ರಂದು ಅದ್ದೂರಿ ತೆಪ್ಪೋತ್ಸವ ನಡೆಯಲಿದೆ. ಮೂರು ದಿನಗಳ ಕಾಲವೂ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಜ.15ರಂದು ಮಕರ ಸಂಕ್ರಮಣ ರಥೋತ್ಸವ ನಡೆಯಲಿದೆ ಎಂದರು.
    ಜ.9ರಂದು ಶ್ರೀ ಗಣಪತಿ ಪೂಜೆ, ಪುಣ್ಯಾಹ, ಶತರುದ್ರಾಭಿಷೇಕ, ದೇವನಾಂದಿ, ಧ್ವಜಾರೋಹಣ, ಸಾಯಂಕಾಲ ರಂಗಪೂಜೆ, ಅಂಕುರಾರೋಪಣ, ಭೇರಿತಾಡನ, ಕೌತುಕ ಬಂಧನ, ಬಲಿ ಉತ್ಸವಗಳು ನಡೆಯಲಿದೆ. ಜ.10ಕ್ಕೆ ಅಗ್ನಿ ಜನನ, ಅಧಿವಾಸ ಹೋಮ, ಮಹಾಪೂಜೆ, ಬಲಿ, ಸಂಜೆ 4ಕ್ಕೆ ಪುರೋತ್ಸವ, ನಂತರ ರಂಗಪೂಜೆ, ಬಲಿ, ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಜ.11ರಂದು ಉಷಾ ಕಾಲದಲ್ಲಿ ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥಸ್ಥಾನ ನಡೆಯಲಿದೆ. ಪ್ರಾತಃಕಾಲದಲ್ಲಿ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಬಲಿ, ಉತ್ಸವ, ಸಂಜೆ ರಂಗ ಪೂಜೆ, ರಾತ್ರಿ ಬಲಿ ಉತ್ಸವ ನಡೆಯಲಿದೆ. ಜ.12ರಂದು ಬೆಳಗ್ಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವ ಬಲಿ, ಶುಭ ಅಭಿಜಿನ್ ಮಹೂರ್ತದಲ್ಲಿ ಶ್ರೀ ಮನ್ಮಹಾರಥಾರೋಹಣ, ರಾತ್ರಿ ಭೂತ ಬಲಿ, ಶಯನೋತ್ಸವ ನಡೆಯಲಿದೆ. ಜ.13ರಂದು ಪ್ರಭೋದೋತ್ಸವ, ಚೂರ್ಣೋತ್ಸವ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಬಲಿ, ಸಾಯಂಕಾಲ ಉತ್ಸವ, ರಾತ್ರಿ 7ಕ್ಕೆ ಅದ್ದೂರಿ ತೆಪ್ಪೋತ್ಸವ, ಸಂಧಾನ, ಪೂರ್ಣಾಹುತಿ, ಧ್ವಜ ಅವರೋಹಣ, ಪ್ರಸಾದ ವಿತರಣೆ ನಡೆಯಲಿದೆ. ಜ.15ಕ್ಕೆ ಶುಭ ಅಭಿಜಿನ್ ಮಹೂರ್ತದಲ್ಲಿ ಮಕರ ಸಂಕ್ರಾಂತಿ ರಥೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
    ಕುಕ್ಕೆ ಪ್ರಶಾಂತ್, ಕಿಶೋರ್, ಜಯಪ್ರಕಾಶ್ ಶೆಟ್ಟಿ, ಅಶೋಕ್ ಶೆಟ್ಟಿ, ನಯನಾ, ವಾಣಿ, ರತ್ನಾಕರ್ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts