More

    VIDEO| ಬರೋಬ್ಬರಿ 30 ಲೀಟರ್​ ಆಲ್ಕೋಹಾಲ್​ ಸೇವಿಸಿದ ಆನೆಗಳ ಹಿಂಡು: ಮುಂದೇನಾಯಿತು ನೀವೇ ನೋಡಿ!

    ಬೀಜಿಂಗ್​: ಚೀನಾದ ಗ್ರಾಮವೊಂದರ ವೈನ್​ ಸ್ಟೋರ್​ ಮೇಲೆ ದಾಳಿ ಮಾಡಿದ 14 ಏಷಿಯನ್​ ಆನೆಗಳ ಗುಂಪು ಕಂಠಪೂರ್ತಿ ಆಲ್ಕೋಹಾಲ್​ ಕುಡಿದು ಗ್ರಾಮಕ್ಕೆ ಹಾನಿ ಮಾಡಿರುವುದಾಗಿ ವರದಿಯಾಗಿದೆ. ಅದರಲ್ಲಿನ ಎರಡು ಆನೆಗಳು ಟೀ ಎಸ್ಟೇಟ್​ನಲ್ಲಿ ಬಿದ್ದು ಹೊರಳಾಡಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ನೈಋತ್ಯ ಚೀನಾದ ಯುನ್ನಾನ್​ ಬಳಿಯ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರು ವಿಡಿಯೋ ಮತ್ತು ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಗ್ರೇನ್​( ಧಾನ್ಯ) ಆಲ್ಕೋಹಾಲ್​ ಸ್ಟೋರ್​ ಮೇಲೆ ದಾಳಿ ಮಾಡಿದ ಆನೆಗಳು ಸುಮಾರು 30 ಲೀಟರ್​​ನಷ್ಟು ಕಾರ್ನ್​(ಜೋಳ) ವೈನ್​ ಅನ್ನು ಸವಿದಿವೆ.

    ಮದ್ಯಪಾನ ಮಾಡಿ ಟೀ ಎಸ್ಟೇಟ್​ ಮೈದಾನದಲ್ಲಿ ಮಲಗಿರುವ ಆನೆಗಳ ಫೋಟೋವನ್ನು ಚೀನಾದ ಮೈಕ್ರೋಬ್ಲಾಗಿಂಗ್​ “ವೈಬೋ” ವೇದಿಕೆಯಲ್ಲಿ ಜುಜೋ ಬಿಂಗ್​ಬಿಂಗ್​ ಟ್ರಾವೆಲ್​ ಫೋಟೋಗ್ರಫಿ ಶೇರ್​ ಮಾಡಿಕೊಂಡಿದೆ. ಈಗಾಗಲೇ ಫೋಟೋಗೆ 140,000 ಲೈಕ್ಸ್​​ಗಳು ಹರಿದುಬಂದಿವೆ.

    ಆನೆಗಳು ಮದ್ಯವನ್ನು ಸೇವಿಸಿದ್ದವು ಎಂಬುದನ್ನು ಖಚಿತಪಡಿಸಲು ಕಷ್ಟವೆಂದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್​ 9ರಂದು ಚೀನಾ ವ್ಯಾಪ್ತಿಯನ್ನು ಪ್ರವೇಶಿಸಿದ ಆನೆಗಳು ಮಾರ್ಚ್​ 11 ಮತ್ತು 14 ಎರಡು ಗ್ರಾಮಗಳಿಗೆ ಭೇಟಿ ನೀಡಿದ್ದವು ಎಂದು ಮಾಹಿತಿ ನೀಡಿದ್ದಾರೆ.

    ಈ ವೇಳೆ ಜೋಳ ತುಂಬಿದ್ದ ನೌಕೆ ಮತ್ತು ಗ್ರೈನ್​ ಆಲ್ಕೋಹಾಲ್​ ಇದ್ದ ಕಡಾಯಿಗೆ ಹಾಗೂ ಸೋಲಾರ್​ ಪ್ಯಾನೆಲ್​, ಕಿಟಕಿ ಮತ್ತು ಬಾಗಿಲುಗಳಿಗೆ ಹಾನಿ ಮಾಡಿವೆ. ಘಟನೆಯಲ್ಲಿ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೆ, ಆನೆಗಳು ಮದ್ಯಪಾನ ಮಾಡಿದ್ದವು ಎಂಬುದನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. (ಏಜೆನ್ಸೀಸ್​)

    ಕರೊನಾ ಸೋಂಕಿನ ಬಗ್ಗೆ ಭಯವೇ?: ವೃಷಭ ರಾಶಿಯವರು ಹೀಗೆ ಮಾಡಿದರೆ ಬೇಸರದೊಂದಿಗೆ ಕಷ್ಟವೂ ಕರಗಲಿದೆ ನೋಡಿ…

    ಕರೊನಾ ಸೋಂಕಿನ ತಾತ್ಕಾಲಿಕ ಬಂದ್​ನಿಂದ ಬೇಸರವೇ? ಮೇಷ ರಾಶಿಯವರು ಹೀಗೆ ಮಾಡಿದರೆ ಬೋರ್​ ಆಗುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts