More

    ಆನೆ ಕಾರ್ಯಪಡೆ ಸಿಬ್ಬಂದಿ ಧರಣಿ ಅಂತ್ಯ

    ಎಚ್.ಡಿ.ಕೋಟೆ: ಇಲ್ಲಿನ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರು ಆನೆ ಕಾರ್ಯಪಡೆ ಸಿಬ್ಬಂದಿ 3 ದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಅಂತ್ಯಗೊಂಡಿದೆ.

    ನಾಡಿಗೆ ಬಂದ ಕಾಡಾನೆಯನ್ನು ಓಡಿಸುವ ಕೆಲಸವನ್ನು ಒಂದು ವರ್ಷದಿಂದ ಮಾಡಿಸಿದ್ದು, ಇದೀಗ ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ನಿಯೋಜನೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬ ಬೀದಿ ಪಾಲಾಗಿದೆ ಎಂದು ಆರೋಪಿಸಿ ಬುಧವಾರ ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಪಡೆ ಸಿಬ್ಬಂದಿ ಧರಣಿ ಆರಂಭಿಸಿದ್ದರು.

    ಕಾರ್ಯನಿಮಿತ್ತ ಶಾಸಕರು ಪಟ್ಟಣಕ್ಕೆ ಬಂದ ವೇಳೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು. ಬಳಿಕ ದೂರವಾಣಿ ಮೂಲಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಅಲ್ಲದೇ, ಕಾರ್ಯಪಡೆ ಸಿಬ್ಬಂದಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯವಾಯಿತು.

    ಪ್ರತಿಭಟನೆಯಲ್ಲಿ ಕಾರ್ಯಪಡೆ ನೌಕರರಾದ ಶಿವಕುಮಾರ್, ಅಣ್ಣಯ್ಯ, ರವಿ, ಭಾಸ್ಕರ್, ಶಿವಪ್ಪ, ಶಿವು, ಕನಕರಾಜ್, ಪ್ರಕಾಶ್ ಕುಮಾರ್, ಪ್ರಗತಿಪರ ಸಂಘಟನೆಯ ಅಕ್ಬರ್ ಪಾಷ, ಎಐಸಿಸಿಟಿಯು ಸಂಚಾಲಕ ಚೌಡಹಳ್ಳಿ ಜವರಯ್ಯ, ನಿಂಗರಾಜು, ಹೈರಿಗೆ ಶಿವರಾಜು, ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts