More

    ಆಹಾರಕ್ಕಾಗಿ ಮನೆ ಮುಂದೆಯೇ ಬಂದು ನಿಂತ ಕಾಡಾನೆ!

    ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಆತಂಕ ಮುಂದುವರಿದಿದೆ. ಹೊಲಗದ್ದೆಗಳಿಗೆ ನುಗ್ಗುತ್ತಿದ್ದ ಕಾಡಾನೆಗಳು ಇದೀಗ ಮನೆಗಳಿಗೇ ಬರತೊಡಗಿವೆ.

    ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆಯೊಂದು ಆಹಾರಕ್ಕಾಗಿ ಮನೆಯೊಂದರ ಮುಂದೆ ಬಂದು ನಿಂತ ಘಟನೆ ನಡೆದಿದೆ.

    ಲೋಕೇಶ್ ಎಂಬುವವರ ಮನೆಯ ಮುಂದೆ ಒಂಟಿ ಸಲಗ ಬಂದು ಕೆಲ ಕಾಲ ನಿಂತಿತ್ತು. ನಂತರವೂ ಮನೆ ಮುಂದೆಯೇ ಅಡ್ಡಾಡಿತು. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

    ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದುವರೆಗೂ ಸುಮಾರು 70 ಮಂದಿ ಆನೆ ದಾಳಗೆ ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಬೆಳೆಗಳೂ ನಾಶವಾಗಿದ್ದು, ಸ್ಥಳೀಯರು ಆತಂಕದಲ್ಲೇ ದಿನದೂಡುತ್ತಿದ್ದಾರೆ. ಆನೆ ಹಾವಳಿಯಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಪದೇಪದೆ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇನ್ನೂ ಅವರ ಬೇಡಿಕೆ ಈಡೇರಿಲ್ಲ.

    ನ.12ರಂದು ಹೈಕೋರ್ಟ್​ ಸೇರಿ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್​

    ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts